ADVERTISEMENT

ರಾಯಚೂರು: ಸೊಪ್ಪು ಸಮೇತ ಟ್ರ್ಯಾಕ್ಟರ್‌ ಟ್ರಾಲಿಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 15:39 IST
Last Updated 3 ಮಾರ್ಚ್ 2021, 15:39 IST
   

ಹಟ್ಟಿಚಿನ್ನದ ಗಣಿ (ರಾಯಚೂರು): ಜೋಳದ ಒಣ ಸೊಪ್ಪು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್‌ ಟ್ರಾಲಿಗೆ ಬೆಂಕಿ ಹೊತ್ತಿಕೊಂಡು ಊರಿದುಹೋದ ಘಟನೆ ಲಿಂಗಸುಗೂರು ತಾಲ್ಲೂಕಿನ ಗೌಡೂರು ಬಳಿ ಬುಧವಾರ ನಡೆದಿದೆ.

ಬಂಡೆಬಾವಿ ಗ್ರಾಮದ ರೈತ ರಮೇಶ ಗುಡ್ಡಕಾಯೋರು ಅವರು ಬಿಳಿಜೋಳದ ಒಣ ಸೊಪ್ಪು ತುಂಬಿಕೊಂಡು ಗೌಡೂರು ಕಡೆಯಿಂದ ಬಂಡೇಬಾವಿಗೆ ತರುತ್ತಿದ್ದರು. ಮಾರ್ಗದ ಮಧ್ಯ ಗೌಡೂರು ತಾಂಡಾದ ರಸ್ತೆಯಲ್ಲಿ ಸೊಪ್ಪಿನ ರಾಶಿಗೆ ವಿದ್ಯುತ್‌ ತಂತಿಗಳು ತಗುಲಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಎಂಜಿನ್‌ ಪ್ರತ್ಯೇಕಗೊಳಿಸಲಾಗಿದೆ.

ಲಿಂಗಸುಗೂರಿನಿಂದ ಅಗ್ನಿಶಾಮಕದಳದ ವಾಹನ ಬರುವಷ್ಟರಲ್ಲಿ ಸುಟ್ಟು ಕರಕಲಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.