ADVERTISEMENT

ದೇವಸೂಗೂರು: ಸಂತೆ ಹರಾಜು ಸಭೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2018, 11:12 IST
Last Updated 23 ಜೂನ್ 2018, 11:12 IST
ಶಕ್ತಿನಗರ ಬಳಿಯ ದೇವಸೂಗೂರು ಗ್ರಾಮ ಪಂಚಾಯಿತ ಕಚೇರಿಯಲ್ಲಿ ಶನಿವಾರ ನಡೆದ ಸಂತೆ ಹರಾಜು ಸಭೆಯಲ್ಲಿ ಬಿಲೆಕ್ಟರ್ ಬಾಬುಮೀಯಾ ಅವರು ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದರು.
ಶಕ್ತಿನಗರ ಬಳಿಯ ದೇವಸೂಗೂರು ಗ್ರಾಮ ಪಂಚಾಯಿತ ಕಚೇರಿಯಲ್ಲಿ ಶನಿವಾರ ನಡೆದ ಸಂತೆ ಹರಾಜು ಸಭೆಯಲ್ಲಿ ಬಿಲೆಕ್ಟರ್ ಬಾಬುಮೀಯಾ ಅವರು ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದರು.   

ಶಕ್ತಿನಗರ: ದೇವಸೂಗೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶನಿವಾರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಟಿ.ಮಾಣಿಕ್ಯಮ್ಮಚಂದಪ್ಪ ಅಧ್ಯಕ್ಷತೆಯಲ್ಲಿ ಸಂತೆ ಹರಾಜು ಸಭೆ ನಡೆಯಿತು.

2018 ಸಾಲಿನ ಜೂನ್‌ 23ರಿಂದ 2019 ಮಾರ್ಚ್‌ 31ರವರೆಗೆ ₹ 1.65ಲಕ್ಷ ಸುರೇಶ ತುಂಗಭದ್ರಾ ಸಂತೆ ಹರಾಜು ಪಡೆದರು.

ದೇವಸೂಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ ಮಾತನಾಡಿ ಸಂತೆ ಮುಗಿದ ಮರುದಿನವೇ ಮಾರುಕಟ್ಟೆ ಸ್ವಚ್ಛಗೊಳಿಸಬೇಕು. ಅಸ್ವಚ್ಛತೆ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ. ಹರಾಜಿನ ಪ್ರಕ್ರಿಯೆ ಮುಗಿದ ತಕ್ಷಣ ವ್ಯಾಪರಸ್ಥರಲ್ಲಿ ಒಂದು ತಕ್ಕಡಿಗೆ ₹ 30 ಮೀರದಂತೆ ಸುಂಕ ವಸೂಲಿ ಮಾಡಬಾರದು ಎಂದರು.

ADVERTISEMENT

ರಾಜಶೇಖರ, ಹನುಮಂತರಾಯ, ಹಂಪನಗೌಡ, ಸುರೇಶ ತುಂಗಭದ್ರ ಅವರು ಸವಾಲು ಹಾಕಿದರು. ಸಭೆಯಲ್ಲಿ ದೇವಸೂಗೂರ ಗ್ರಾಮ ಪಂಚಾಯಿತಿ ಸಹಾಯಕ ಅಧಿಕಾರಿ ಉದಯಕುಮಾರ, ಸದಸ್ಯರಾದ ಸಾಂಬಶಿವ, ಸುರೇಶಗೌಡ ಚೇಗುಂಟಿ, ವೆಂಕಟೇಶ ಯಾದವ, ಮುಖಂಡರಾದ ಹಂಪನಗೌಡ, ವೆಂಕಟೇಶ ದೇವಸೂಗೂರು, ಬಿಲ್‌ಕಲೆಕ್ಟರ್ ಬಾಬುಮೀಯಾ,ಸೂಗಪ್ಪ ಮ್ಯಾತ್ರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.