ADVERTISEMENT

ಮಂತ್ರಾಲಯ ಮಠದ ಹೆಸರಿನಲ್ಲಿ ವಂಚನೆ; ನಕಲಿ ವೆಬ್‌ಸೈಟ್‌, ಪರಿಮಳ ಪ್ರಸಾದ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 3:05 IST
Last Updated 27 ಜೂನ್ 2022, 3:05 IST
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಅಧಿಕೃತ ವೆಬ್‌ಸೈಟ್‌ನ ಸ್ಕ್ರೀನ್‌ ಶಾಟ್‌
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಅಧಿಕೃತ ವೆಬ್‌ಸೈಟ್‌ನ ಸ್ಕ್ರೀನ್‌ ಶಾಟ್‌   

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಪರಿಮಳ ಪ್ರಸಾದ ಹೆಸರಿನಲ್ಲಿ ಹಾಗೂ ನಕಲಿ ವೆಬ್‌ಸೈಟ್ ಸೃಷ್ಟಿಸಿ ನೆರವಿನ ನೆಪದಲ್ಲಿ ಭಕ್ತರಿಗೆ ವಂಚನೆ ಮಾಡಲಾಗುತ್ತಿದೆ.

ಕೋವಿಡ್ ನಂತರ ಅರ್ಚಕರು, ಬಡವರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ನಂಬಿಸಿ ನಕಲಿ ವೆಬ್‍ಸೈಟ್ ಸೃಷ್ಟಿಸಿ, ನೆರವಿಗಾಗಿ ಹಣ ಹಾಕುವಂತೆ ಮನವಿ ಮಾಡಿ ನೆರವು ಪಡೆಯಲಾಗುತ್ತಿದೆ. ಮಂತ್ರಾಲಯ ಮಠದ ಅಭಿವೃದ್ಧಿಗಾಗಿ ಭಕ್ತರು ಫೋನ್ ಪೇ ಮಾಡುವಂತೆ ವಾಟ್ಸ್‌ಆ್ಯಪ್ ಗ್ರೂಪ್‍ಗಳಲ್ಲೂ ಸಂದೇಶ ಹರಿಬಿಡಲಾಗಿದೆ.

‘ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ಮಂತ್ರಾಲಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ’ ಎಂದು ಶ್ರೀಮಠದ ವ್ಯವಸ್ಥಾಪಕ ಶ್ರೀನಿವಾಸರಾವ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.