ADVERTISEMENT

ಸಿಂಧನೂರು | ಸಾಲಬಾಧೆ: ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 7:19 IST
Last Updated 1 ಸೆಪ್ಟೆಂಬರ್ 2025, 7:19 IST
ಶಂಕರಪ್ಪ 
ಶಂಕರಪ್ಪ    

ಸಿಂಧನೂರು: ತಾಲ್ಲೂಕಿನ ಜಂಗಮರಹಟ್ಟಿ ಗ್ರಾಮದಲ್ಲಿ ಸಾಲಬಾಧೆ ತಾಳದೆ ರೈತರೊಬ್ಬರು ನೇಣು ಹಾಕಿಕೊಂಡು ಭಾನುವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮದ ಶಂಕರಪ್ಪ ಮಲ್ಲಪ್ಪ ಅಡ್ಡೇರ(48) ಮೃತರು. ಮೃತ ಶಂಕರಪ್ಪನ ತಾಯಿಯ ಹೆಸರಿನಲ್ಲಿ 3.18 ಎಕರೆ ಜಮೀನು ಇದೆ. ಶಂಕರಪ್ಪ ಅವರು ಜಮೀನು ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಜವಳಗೇರಾ ಗ್ರಾಮದ ಕೆನರಾ ಬ್ಯಾಂಕ್‌ನಲ್ಲಿ ₹1.30 ಲಕ್ಷ ಹಾಗೂ ಕೈಸಾಲ ಅಂದಾಜು ₹ 6 ಲಕ್ಷ ಸಾಲ ಮಾಡಿದ್ದರು.

ಹೆಂಡತಿ ಮಕ್ಕಳು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಶಂಕರಪ್ಪ ಮಾತ್ರ ಒಂಟಿಯಾಗಿ ಜಂಗಮರಹಟ್ಟಿಯಲ್ಲಿ ವಾಸ ಮಾಡುತ್ತಿದ್ದರು. ಸಾಲದ ಬಾಧೆ ತಾಳಲಾರದೆ ಬೆಳಿಗ್ಗೆ 8.30 ಗಂಟೆಗೆ ತಮ್ಮ ಮನೆಯ ಫ್ಯಾನ್‍ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ADVERTISEMENT

ಮೃತದೇಹವನ್ನು ತಂದು ಸಿಂಧನೂರಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮೃತ ಶಂಕರಪ್ಪನ ಪುತ್ರ ಬಸವಲಿಂಗ ನೀಡಿದ ದೂರಿನ ಮೇರೆಗೆ ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.