ADVERTISEMENT

ರಾಜ್ಯಸಭಾ ಮಾಜಿ ಸದಸ್ಯ ಅಬ್ದುಲ್ ಸಮದ್ ನಿಧನ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 7:15 IST
Last Updated 22 ನವೆಂಬರ್ 2022, 7:15 IST
ಅಬ್ದುಲ್ ಸಮದ್
ಅಬ್ದುಲ್ ಸಮದ್   

ರಾಯಚೂರು: ರಾಜ್ಯಸಭೆ ಮಾಜಿ ಸದಸ್ಯ ಅಬ್ದುಲ್ ಸಮದ್ ಸಿದ್ದಿಖಿ (87) ಅವರು ಅನಾರೋಗ್ಯದಿಂದಾಗಿ ಮನೆಯಲ್ಲಿ ಸೋಮವಾರ ರಾತ್ರಿ ನಿಧನರಾದರು.

ಬಹುದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಹೈದರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ರಾಯಚೂರಿಗೆ‌ ಈಚೆಗೆ ವಾಪಸ್ ಕರೆತರಲಾಗಿತ್ತು.

ಅಬ್ದುಲ್ ಸಮದ್ ಸಿದ್ದಿಖಿ ಅವರು ರಾಯಚೂರು ನಗರದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬಡವರ ಶಿಕ್ಷಣಕ್ಕೆ ಕಾರಣರಾಗಿದ್ದರು. ಸಫೀಯಾ ಸಂಸ್ಥೆ ಸ್ಥಾಪಿಸಿ ಅದರಡಿ ಮಹಿಳೆಯರಿಗೆ ಡಿ.ಇಡಿ ಕಾಲೇಜು ಸ್ಥಾಪಿಸಿದ್ದರು.

ADVERTISEMENT

ರಾಯಚೂರು ನಗರಸಭೆಯ ಸದಸ್ಯರಾಗಿದ್ದ ಅವರು, ಜನತಾದಳದಿಂದ 1988ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿ 1994ರವರೆಗೆ ಕಾರ್ಯನಿರ್ವಹಿಸಿದ್ದರು.

ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪತ್ರಿಯರು ಇದ್ದಾರೆ.

ಅಂತ್ಯಕ್ರಿಯೆಯು ನವೆಂಬರ್ 22ರಂದು ಮಧ್ಯಾಹ್ನ ಶೇಖಮಿಯಾ ಬಾಬಾ ಖಬರಸ್ಥಾನದಲ್ಲಿ ನೆರವೇರಲಿದೆ ಎಂದು ಕುಟುಂಬದ ಸಂಬಂಧಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.