ADVERTISEMENT

ರೈತರ ಪ್ರತಿಭಟನಾ ಸ್ಥಳಕ್ಕೆ ಸಚಿವ ಶ್ರೀರಾಮುಲು ಭೇಟಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 15:12 IST
Last Updated 4 ಏಪ್ರಿಲ್ 2021, 15:12 IST
ಕವಿತಾಳ ಸಮೀಪದ ಪಾಮನಕಲ್ಲೂರಿನಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಈಚೆಗೆ ಸಚಿವ ಶ್ರೀರಾಮುಲು ಭೇಟಿ ನೀಡಿ, ಮಾತನಾಡಿದರು
ಕವಿತಾಳ ಸಮೀಪದ ಪಾಮನಕಲ್ಲೂರಿನಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಈಚೆಗೆ ಸಚಿವ ಶ್ರೀರಾಮುಲು ಭೇಟಿ ನೀಡಿ, ಮಾತನಾಡಿದರು   

ಪಾಮನಕಲ್ಲೂರು (ಕವಿತಾಳ): 5ಎ ನಾಲೆ ನಿರ್ಮಾಣಕ್ಕೆ ಆಗ್ರಹಿಸಿ ಪಾಮನಕಲ್ಲೂರಿನಲ್ಲಿ ರೈತರು ಮತ್ತು ಸಂಯಕ್ತ ಹೋರಾಟ ವೇದಿಕೆ ಪ್ರತ್ಯೇಕವಾಗಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಸಚಿವ ಬಿ.ಶ್ರೀರಾಮುಲು ಈಚೆಗೆ ಭೇಟಿ ನೀಡಿ ರೈತರೊಂದಿಗೆ ಮಾತನಾಡಿದರು.

ಈ ಸಂದರ್ಭದಲ್ಲಿ ರೈತ ಮುಖಂಡ ತಿಮ್ಮನಗೌಡ ಚಿಲ್ಕರಾಗಿ ಮಾತನಾಡಿ, ‘ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿದ್ದರೂ ಕಳೆದ ಮೂರು ಚುನಾವಣೆಗಳಲ್ಲಿ ಕ್ಷೇತ್ರದ ಜನರು ಪ್ರತಾಪಗೌಡ ಪಾಟೀಲರನ್ನು ಬೆಂಬಲಿಸಿದ್ದಾರೆ. 5ಎ ನಾಲೆ ಜಾರಿ ವಿಷಯದಲ್ಲಿ ಅವರು ಸ್ಪಂದಿಸದ ಕಾರಣ ರೈತ ವರ್ಗಕ್ಕೆ ನೋವಾಗಿದೆ. ತಾಂತ್ರಿಕ ಸಮಸ್ಯೆಯ ನೆಪವೊಡ್ಡಿ ನಾಲೆ ನಿರ್ಮಾಣದ ಬಗ್ಗೆ ಕಾಳಜಿ ವಹಿಸದಿರುವುದು ರೈತರಲ್ಲಿ ಬೇಸರ ಮೂಡಿಸಿದೆ’ ಎಂದರು.

ಸಚಿವ ಶ್ರೀರಾಮುಲು ಮಾತನಾಡಿ, ‘ಕ್ಷೇತ್ರದಲ್ಲಿ ಮುಖ್ಯ ಮಂತ್ರಿಗಳು ಪ್ರಚಾರ ಕೈಗೊಳ್ಳಲಿದ್ದು ಅವರಿಗೆ ಮಾಹಿತಿ ನೀಡುವ ಮೂಲಕ 5 ಎ ನಾಲೆ ನಿರ್ಮಾಣ ಕುರಿತು ರೈತರ ಬೇಡಿಕೆ ಬಗ್ಗೆ ಮನವರಿಕೆ ಮಾಡಲಾಗುವುದು’ ಎಂದರು.

ADVERTISEMENT

5 ಎ ನಾಲೆ ಸಂಯುಕ್ತ ಹೋರಾಟ ಸಮಿತಿಯ ಸಂಚಾಲಕ ಆರ್‍.ಮಾನಸಯ್ಯ ಮತ್ತು ಪ್ರತಾಪಗೌಡ ಪಾಟೀಲ್‍ ಮಾತನಾಡಿದರು.

ನಾಗಪ್ಪ ತಳವಾರ, ಆದೇಶ ನಗನೂರು, ಮೌಲಪ್ಪ, ತಿಪ್ಪಣ್ಣ ಮತ್ತು ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.