ಲಿಂಗಸುಗೂರು: ಸೋಮವಾರ ಅಬ್ಬರಿಸಿದ ಮಳೆಯಿಂದಾಗಿ ತಾಲ್ಲೂಕಿನ ಈಚನಾಳ ಗ್ರಾಮದ ಬಳಿಯ ಹಳ್ಳ ಭರ್ತಿಯಾಗಿ ಉಕ್ಕಿ ಹರಿಯುತ್ತಿರುವ ನೀರಿನಲ್ಲಿ ತಂದೆ ತನ್ನ ಮಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಶಾಲೆಗೆ ಬಿಟ್ಟು ಬಂದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷರಾಗಿರುವ ಆನಂದ ಕುಂಬಾರ ಅವರು ಈಚನಾಳ ಗ್ರಾಮದ ಹೊರವಲಯದಲ್ಲಿ ಮನೆ ಇದೆ. ಈಚನಾಳ-ನೀರಲಕೇರಾ ನಡುವಿನ ಹಳ್ಳ ತುಂಬಿ ನೆಲಮಟ್ಟದ ಸೇತುವೆ ಮೇಲೆ ಹರಿಯುತ್ತಿದೆ. ಮಗಳಿಗೆ ಶಾಲೆ ತಪ್ಪಬಾರದೆಂಬ ಉದ್ದೇಶದಿಂದ ಹರಿಯುವ ನೀರಿನಲ್ಲಿಯೇ ತನ್ನ ಮಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಹಳ್ಳ ದಾಟಿಸಿ ಈಚನಾಳ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಬಿಟ್ಟು ಬಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.