ADVERTISEMENT

ಕವಿತಾಳ | ಬಟ್ಟೆ ಅಂಗಡಿಯಲ್ಲಿ ಬೆಂಕಿ: ನಷ್ಟ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 14:31 IST
Last Updated 17 ಸೆಪ್ಟೆಂಬರ್ 2024, 14:31 IST
ಕವಿತಾಳದ ಬಟ್ಟೆ ಅಂಗಡಿಯಲ್ಲಿ ಬೆಂಕಿಯಿಂದ ಬಟ್ಟೆಗಳು ಮತ್ತು ಯಂತ್ರ ಸುಟ್ಟಿರುವುದು
ಕವಿತಾಳದ ಬಟ್ಟೆ ಅಂಗಡಿಯಲ್ಲಿ ಬೆಂಕಿಯಿಂದ ಬಟ್ಟೆಗಳು ಮತ್ತು ಯಂತ್ರ ಸುಟ್ಟಿರುವುದು   

ಕವಿತಾಳ: ವಿದ್ಯುತ್‌ ಶಾರ್ಟ್‌ ಸರ್ಕೀಟ್‌ನಿಂದ ಬಟ್ಟೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಎಂಬ್ರಾಯಡರಿ ಮಷೀನ್‌ ಮತ್ತು ರೇಷ್ಮೆ ಸೀರೆಗಳು ಸೇರಿದಂತೆ ಬಟ್ಟೆಗಳು ಸಂಪೂರ್ಣ ಸುಟ್ಟಿವೆ.

ಪಟ್ಟಣದ ಪಿ.ವಿ. ಕಲೆಕ್ಷನ್‌ ಬಟ್ಟೆ ಅಂಗಡಿಯಲ್ಲಿ ಸೋಮವಾರ ತಡರಾತ್ರಿ ಘಟನೆ ಸಂಭವಿಸಿದ್ದು, ಮಂಗಳವಾರ ಬೆಳಿಗ್ಗೆ ಬಂದು ಅಂಗಡಿ ತೆರೆದಾಗ ಬೆಂಕಿ ಕಂಡುಬಂದಿದೆ. ಅಂದಾಜು ₹10 ಲಕ್ಷ ನಷ್ಟ ಸಂಭವಿಸಿದೆ. ಸ್ಥಳೀಯರು ಬೆಂಕಿ ನಂದಿಸಿದ್ದಾರೆ ಎಂದು ಅಂಗಡಿ ಮಾಲೀಕ ಪ್ರದೀಪಕುಮಾರ ಇಲ್ಲೂರು ತಿಳಿಸಿದರು.

ಕವಿತಾಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.