ಶಕ್ತಿನಗರ: ಬೇಸಿಗೆಯಿಂದ ಮರ್ಚೇಡ್ ಗ್ರಾಮದ ಕೆರೆಯ ನೀರು ಖಾಲಿಯಾದ ಪರಿಣಾಮ, ಮೀನುಗಳು ಮಾರಣ ಹೋಮ ನಡೆದಿದೆ.
ರಾಯಚೂರು ತಾಲ್ಲೂಕಿನ ಮರ್ಚೇಡ್ ಗ್ರಾಮದ ಕೆರೆ. ಈ ಬಾರಿ ಸಂಪೂರ್ಣ ಬರಿದಾಗಿದ್ದು, ನೀರಿಲ್ಲದೇ ಕೆರೆ ದಡದಲ್ಲಿ ರಾಶಿ ರಾಶಿ ಮೀನುಗಳು ಸತ್ತು ಬಿದ್ದಿವೆ. ಕೆರೆಯ ದಡದಲ್ಲಿ ದುರ್ವಾಸನೆ ಬೀರಿದ್ದು, ದಡದ ಬಳಿ ಹೋಗುವವರ ಜನರು ಮೂಗು ಮುಚ್ಚಿಕೊಂಡು ಹೋಗುವಂತಾಗಿದೆ.
ಈ ಬಾರಿಯ ಬಿರು ಬೇಸಿಗೆಯಿಂದ ಎಲ್ಲೆಡೆ ಭೀಕರ ಕ್ಷಾಮ ಆವರಿಸಿದ್ದು ಜನ ಕಂಗಾಲಾಗಿದ್ದಾರೆ. ಇನ್ನೂ ಕೆರೆಕಟ್ಟೆಗಳಲ್ಲಿ ನೀರು ಖಾಲಿಯಾಗುತ್ತಿದ್ದು ಜಲಚರಣಗಳ ಮಾರಣ ಹೋಮ ನಡೆಯುತ್ತಿದೆ. ಮೀನುಗಾರರಿಗೆ ಸರಿಯಾಗಿ ಮೀನುಗಳೇ ಸಿಗದಾಗಿದ್ದು ಕೆಸರಿನ ಮಡುವಿನಲ್ಲಿ ಬಿದ್ದಿರುವ ಮೀನುಗಳನ್ನು ಹಿಡಿಯುತ್ತಿದ್ದಾರೆ. ಸತ್ತಿರುವ ಮೀನುಗಳನ್ನು ತಿನ್ನಲು, ನಾಯಿ, ಪಕ್ಷಿಗಳು ಕೆರೆ ಹತ್ತಿರ ಬರುತ್ತಿವೆ.
ಕೆರೆಯಲ್ಲಿ ನೀರು ಸಂಪೂರ್ಣ ಭರ್ತಿಯಾಗಿದ್ದಾಗ ವಿವಿಧ ಭಾಗಗಳಿಂದ ಪಕ್ಷಿಗಳು ವಲಸೆ ಬರುತ್ತಿದ್ದವು. ಆದರೆ ಈಗ ಸತ್ತ ಮೀನುಗಳು ತಿನ್ನಲು ಬರುವಂತಾಗಿದೆ. ಮೊಸಳೆ, ಮೀನುಗಳಂತಹ ಜಲಚರಗಳು ನೀರಿಲ್ಲದೆ ಹಾಹಾಕಾರಕ್ಕೆ ತುತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.