ADVERTISEMENT

ತಗ್ಗಿದ ಹೊರಹರಿವು: ಕೃಷ್ಣಾನದಿ ಪ್ರವಾಹದಲ್ಲಿ ಸ್ಥಿರತೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 2:40 IST
Last Updated 27 ಜುಲೈ 2021, 2:40 IST

ರಾಯಚೂರು: ಕೃಷ್ಣಾನದಿಗೆ ನಾರಾಯಣಪುರ ಜಲಾಶಯದಿಂದ ಹೊರಬಿಡುತ್ತಿರುವ ನೀರಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. 2.86 ಲಕ್ಷ ಕ್ಯುಸೆಕ್‌ ಅಡಿ ಬಿಡಲಾಗುತ್ತಿದೆ.

ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಸೇತುವೆ ಹಾಗೂ ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿವೆ. ಆದರೆ, ರಾಯಚೂರು ತಾಲ್ಲೂಕಿನ ಗುರ್ಜಾಪುರ ಸೇತುವೆ ಮೇಲಿನ ನೀರು ಕೆಳಗೆ ಸರಿದಿದೆ.

ತುಂಗಾಭದ್ರಾ ನದಿಯಲ್ಲೂ ಪ್ರವಾಹ ಶುರುವಾಗಿದೆ. ಹೊಸಪೇಟೆಯ ಜಲಾಶಯದಿಂದ ನದಿಗೆ ಒಂದು ಲಕ್ಷಕ್ಕೂ ಅಧಿಕ ಕ್ಯುಸೆಕ್‌ ಅಡಿ ನೀರು ಬರುತ್ತಿದೆ.

ADVERTISEMENT

ಸಿಂಧನೂರು, ಮಾನ್ವಿ ಹಾಗೂ ರಾಯಚೂರು ತಾಲ್ಲೂಕುಗಳ ನದಿತೀರದಲ್ಲಿ ಮುನ್ನಚ್ಚರಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.