ADVERTISEMENT

ಸಂಘಟಿತ ಹೋರಾಟಕ್ಕೆ ಮುಂದಾಗಿ; ಭಾರತೀಯ ಅಂಚೆ ನೌಕರರ ಸಂಘದ ಕಾರ್ಯದರ್ಶಿ ಕರೆ

ಭಾರತೀಯ ಅಂಚೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಶಿವಕುಮಾರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 3:04 IST
Last Updated 4 ಅಕ್ಟೋಬರ್ 2021, 3:04 IST
ರಾಯಚೂರಿನ ಖಾಸಗಿ ಹೋಟೆಲ್‌ನಲ್ಲಿ ರಾಷ್ಟ್ರೀಯ ಅಂಚೆ ನೌಕರರ ಸಂಘ, ರಾಯಚೂರು ಗ್ರಾಮೀಣ ಅಂಚೆ ನೌಕರರ ವಿಭಾಗದಿಂದ ಭಾನುವಾರ ಆಯೋಜಿಸಲಾಗಿದ್ದ 21ನೇ ದ್ವೈವಾರ್ಷಿಕ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾರತೀಯ ಅಂಚೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಶಿವಕುಮಾರ ಮಾತನಾಡಿದರು
ರಾಯಚೂರಿನ ಖಾಸಗಿ ಹೋಟೆಲ್‌ನಲ್ಲಿ ರಾಷ್ಟ್ರೀಯ ಅಂಚೆ ನೌಕರರ ಸಂಘ, ರಾಯಚೂರು ಗ್ರಾಮೀಣ ಅಂಚೆ ನೌಕರರ ವಿಭಾಗದಿಂದ ಭಾನುವಾರ ಆಯೋಜಿಸಲಾಗಿದ್ದ 21ನೇ ದ್ವೈವಾರ್ಷಿಕ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾರತೀಯ ಅಂಚೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಶಿವಕುಮಾರ ಮಾತನಾಡಿದರು   

ರಾಯಚೂರು: ‘ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ಸರ್ಕಾರಿ ಸೌಮ್ಯದ ಅಂಚೆ ಇಲಾಖೆಯನ್ನು ಖಾಸಗೀಕರಣಗೊಳಿಸಲು ವ್ಯವಸ್ಥಿತವಾಗಿ ಕಾರ್ಯಯೋಜನೆ ರೂಪಿಸುತ್ತಿದೆ. ನೌಕರರು ಸರ್ಕಾರದ ವಿರುದ್ಧ ಸಂಘಟಿತ ಹೋರಾಟಕ್ಕೆ ಮುಂದಾಗಬೇಕು‘ ಎಂದು ಭಾರತೀಯ ಅಂಚೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಶಿವಕುಮಾರ ತಿಳಿಸಿದರು.

ನಗರದ ಅತಿಥಿ ಹೋಟೆಲ್‌ನಲ್ಲಿರಾಷ್ಟ್ರೀಯ ಅಂಚೆ ನೌಕರರ ಸಂಘ, ರಾಯಚೂರು ಗ್ರಾಮೀಣ ಅಂಚೆ ನೌಕರರ ವಿಭಾಗದಿಂದ 21ನೇ ದ್ವೈವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಯುಗದಲ್ಲಿ ಅಂತರ್ ಜಾಲ ಮುಂದುವರೆದರೆ ನಡುವೆ ಅಂಚೆ ನೌಕರರು ಅನೇಕ ಸವಾಲು, ಸಮಸ್ಯೆಗಳ ನಡುವೆ ಕೆಲಸ ಮಾಡುವಂತಾಗಿದೆ.

ಜನರಿಗೆ ತ್ವರಿತಗತಿಯಲ್ಲಿ ಸೇವೆ ನೀಡಲು ಅನೇಕ ತೊಡಕುಗಳು ಎದುರಿಸಬೇಕಿದೆ. ಗುಣಮಟ್ಟ ಸೌಲಭ್ಯ ನೀಡದ ಸರ್ಕಾರದ ಧೋರಣೆಯಿಂದ ತಾಂತ್ರಿಕ ಸಮಸ್ಯೆಗಳಿಂದ ನೌಕರರು ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ.ಅಂಚೆ ಇಲಾಖೆಯ ‌ನೌಕರರು ತಮ್ಮ ಸಮಸ್ಯೆಗಳನ್ನು ವಿಭಾಗೀಯ ಮಟ್ಟದಲ್ಲಿ ಗಮನಕ್ಕೆ ತರಬೇಕು. ಅಂಚೆ ನೌಕರರ ಬೇಡಿಕೆಗಳ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ADVERTISEMENT

ಭಾರತೀಯ ಅಂಚೆ ನೌಕರರ ಸಂಘದ ಕಾರ್ಯದರ್ಶಿ ಖಂಡೂಜಿರಾವ್, ಕೋವಿಡ್ ವೇಳೆ ಅಂಚೆ ನೌಕರರೂ ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಕೋವಿಡ್‌ನಿಂದ ಸಾವನ್ನಪ್ಪಿದವರಿಗೆ ಸರ್ಕಾರ ‌₹ 10 ಲಕ್ಷ ಪರಿಹಾರ ನೀಡಿಲ್ಲ. ಅಂಚೆ ನೌಕರರ ಸಮಸ್ಯೆಗಳ ಬಗ್ಗೆ ಕೆಳಹಂತದ ಸಮಸ್ಯೆಗಳ ನನಗೆ ಅರಿವಿದೆ. ಸರ್ಕಾರ ಒಂದು ಕಡೆ ಗುರಿ ನೀಡಿ ಮತ್ತೊಂದು ಕಡೆ ಖಾಸಗೀಕರಣಕ್ಕೆ ಮುಂದಾಗಿದೆ ಎಂದರು.

ಅಂಚೆ ಇಲಾಖೆಯನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ವ್ಯವಸ್ಥಿತ ಹುನ್ನಾರ ನಡೆಸಿದ್ದು, ಸರ್ಕಾರದ ತಪ್ಪು ನಿರ್ಧಾರವನ್ನು ಪ್ರಶ್ನಿಸಲು ನಮ್ಮ ಸಂಘಟನೆಗಳ ವಿಫಲವಾಗುತ್ತಿವೆ. ಸಂಘಟನಾತ್ಮಕ ಹೋರಾಟದಿಂದ ಸರ್ಕಾರಕ್ಕೆ ಪಾಠ ಕಲಿಸಬೇಕು ಎಂದು ಹೇಳಿದರು.

ರಾಯಚೂರು ವಿಭಾಗೀಯ ಕಾರ್ಯದರ್ಶಿ ಬಸವರಾಜ ದೊರೆ ಮಾತನಾಡಿ, ಅಂಚೆ ನೌಕರರ ಸಂಘ ಯಾವುದೇ ಫಲಾಪೇಕ್ಷೆಯಿಲ್ಲದೇ ನೌಕರರ ಸಮಸ್ಯೆಗಳಿಗೆ ಪರಿಹಾರಕ್ಕೆ ಕೆಲಸ ಮಾಡುತ್ತಿದೆ. ವಿಶ್ವಾಸ, ನಿಸ್ವಾರ್ಥ ಸೇವೆ ನೀಡುವ ಸಂಘಟನೆಯ ಬಲವರ್ಧನೆಗೆ ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.

ಅಂಚೆ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಮಹಾದೇವ್ ಮಾತನಾಡಿದರು. ಈ ವೇಳೆ ಅಂಚೆ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಭಾರತೀಯ ಅಂಚೆ ನೌಕರರ ಸಂಘದ ರಾಜ್ಯ ವಲಯ ಅಧ್ಯಕ್ಷ ಮೋಹನ್ ಕುಮಾರ ಕಟ್ಟಿಮನಿ, ಅಂಚೆ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸಂಗಪ್ಪ, ಪಿ 3 ಅಧ್ಯಕ್ಷ ಶ್ಯಾಮಸುಂದರ್, ಹನುಮಂತಪ್ಪ ಅಡವಿ, ರಾಜು ಮಡಿವಾಳರ, ಆರ್.ವಿ ಅಂಗಡಿ, ಎಂ.ಪಿ ಚಿತ್ರಸೇನ, ಭೀಮಸೇನ ಎಂ.ಎನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.