ಕವಿತಾಳ (ರಾಯಚೂರು ಜಿಲ್ಲೆ): ಮಸ್ಕಿ ತಾಲ್ಲೂಕಿನ ಇಲಾಲಾಪುರ ಗ್ರಾಮದಲ್ಲಿ ಹಗಲೇ ತೋಳ ದಾಳಿ ಮಾಡಿದ್ದು 5 ವರ್ಷದ ಮಗು ಸೇರಿದಂತೆ ಐದು ಜನರನ್ನು ಕಚ್ಚಿ ಗಾಯಗೊಳಿಸಿದೆ. ಗಾಯಾಳುಗಳನ್ನು ಲಿಂಗಸುಗೂರು ಮತ್ತು ಮಸ್ಕಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಗ್ರಾಮದ ಶಿವಪ್ಪ ಕುರುಬರ, ದಯಾನಂದರೆಡ್ಡಿ, ಅಭಿಷೇಕ, ಸಮರ್ಥ ಮತ್ತು ಮೀನಾಕ್ಷಿ ಗಾಯಗೊಂಡಿದ್ದಾರೆ.
ಗ್ರಾಮದ ಅಗಸಿ ಹತ್ತಿರದ ಮನೆ ಮುಂದೆ ಕುಳಿತಿದ್ದವರ ಮೇಲೆ ತೋಳ ದಾಳಿ ಮಾಡಿದೆ. ಸೈಕಲ್ ಓಡಿಸುತ್ತಿದ್ದ ಅಭಿಷೇಕನನ್ನು ಅಟ್ಟಿಸಿಕೊಂಡು ಹೋಗಿ ಕಚ್ಚಿದ್ದು ತೀವ್ರ ಗಾಯಗಳಾಗಿವೆ. ಸಾರ್ವಜನಿಕರು ತೋಳವನ್ನು ಓಡಿಸಿದ್ದು ಬೆಂಚಮರಡಿ ಗ್ರಾಮದ ಕಡೆ ಹೋಗಿದ್ದನ್ನು ಗಮನಿಸಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಬೆಂಚಮರಡಿ ಗ್ರಾಮಸ್ಥರು ಬಡಿಗೆ ಬೆತ್ತಗಳನ್ನು ಹಿಡಿದು ಕಾಯ್ದು ಕುಳಿತು ತೋಳದ ಮೇಲೆ ದಾಳಿ ಮಾಡಿ ಸಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.