ADVERTISEMENT

ಲಿಂಗಸೂಗುರು | ಗಣೇಶ ಮೂರ್ತಿಗಳ ವಿಸರ್ಜನೆ: ಪೊಲೀಸ್ ಹೈ ಅಲರ್ಟ್

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2024, 14:26 IST
Last Updated 13 ಸೆಪ್ಟೆಂಬರ್ 2024, 14:26 IST
ಲಿಂಗಸುಗೂರು ಪಟ್ಟಣದಲ್ಲಿ ಗುರುವಾರ ರಾತ್ರಿ ಪಟ್ಟಣದಲ್ಲಿ ಹೈ ಅಲರ್ಟ್‌ ಜಾಗೃತಿ ನಿಮಿತ್ತ ಪೊಲೀಸ್‍ ಇನ್‌ಪೆಕ್ಟರ್‌ ಪುಂಡಲಿಕ ಪಟತ್ತರ್ ನೇತೃತ್ವದಲ್ಲಿ ಪರೇಡ್‍ ನಡೆಸಲಾಯಿತು
ಲಿಂಗಸುಗೂರು ಪಟ್ಟಣದಲ್ಲಿ ಗುರುವಾರ ರಾತ್ರಿ ಪಟ್ಟಣದಲ್ಲಿ ಹೈ ಅಲರ್ಟ್‌ ಜಾಗೃತಿ ನಿಮಿತ್ತ ಪೊಲೀಸ್‍ ಇನ್‌ಪೆಕ್ಟರ್‌ ಪುಂಡಲಿಕ ಪಟತ್ತರ್ ನೇತೃತ್ವದಲ್ಲಿ ಪರೇಡ್‍ ನಡೆಸಲಾಯಿತು   

ಲಿಂಗಸುಗೂರು: ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ರಾಜ್ಯದ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ  ನಡೆದ ಅಹಿತಕರ ಘಟನೆಗೆ ಹಿನ್ನೆಲೆಯಲ್ಲಿ ಪೊಲೀಸ್‍ ಇಲಾಖೆ ಹಿರಿಯ ಅಧಿಕಾರಿಗಳ ಮುನ್ಸೂಚನೆ ಆಧರಿಸಿ ಪಟ್ಟಣದಲ್ಲಿ ಹೈ ಅಲರ್ಟ್‌ ಘೋಷಿಸಿ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಜಾಗೃತಿ ನಡೆಸಲಾಯಿತು.

ಗುರುವಾರ ರಾತ್ರಿ ಪೊಲೀಸ್‍ ಮತ್ತು ಗೃಹ ರಕ್ಷಕ ದಳ ಸಿಬ್ಬಂದಿ ತುರ್ತು ಸಭೆ ಕರೆದು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಮೇತ ಹೈ ಅಲರ್ಟ್‌ ಜಾಗೃತಿ ಮೂಡಿಸಿದರು. ಏಕಾಏಕಿ ಹತ್ತಾರು ಪೊಲೀಸ್‍ ವಾಹನಗಳು ಸೈರನ್‍ ಹಾಕಿ ಸಂಚರಿಸಿದ್ದು ನಾಗರಿಕರನ್ನು ಕೆಲ ಸಮಯ ಬೆಚ್ಚಿ ಬೀಳಿಸಿತ್ತು.

ಪೊಲೀಸ್‍ ಇನ್‍ಸ್ಪೆಕ್ಟರ್ ಪುಂಡಲಿಕ್‍ ಪಟತ್ತರ್ ಅವರನ್ನು ಸಂಪರ್ಕಿಸಿದಾಗ, ‘ಯಾವುದೇ ಅಹಿತಕರ ಘಟನೆ ಜರುಗಿಲ್ಲ. ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಆಧರಿಸಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಮೇತ ಹೈ ಅಲರ್ಟ್‌ ಮೂಲಕ ಜಾಗೃತಿ ಮೂಡಿಸಲಾಗಿದೆ. ತಾಲ್ಲೂಕಿನ ಜನತೆ ಶಾಂತಿಪ್ರಿಯರಿದ್ದಾರೆ’ ಎಂದು ಹೇಳಿದರು.

ADVERTISEMENT

ಪಿಎಸ್‍ಐ, ಎಎಸ್‍ಐ ಸೇರಿದಂತೆ ಪೊಲೀಸ್‍ ಕಾನ್‌ಸ್ಟಬಲ್‌ಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.