ಶಕ್ತಿನಗರ: ಯಾಪಲದಿನ್ನಿ ಠಾಣೆ ಪೊಲೀಸರು ಡಿ.ರಾಂಪುರ ಸಮೀಪದ ಜಮೀನಿನಲ್ಲಿ ಬೆಳೆದಿದ್ದ 1.6 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಆರೋಪಿಯನ್ನು ಬಂಧಿಸಿದ್ದಾರೆ.
ವಡ್ಡೆಪಲ್ಲಿ ಗ್ರಾಮದ ಭೀಮೇಶ(40) ಬಂಧಿತ.
‘ಡಿ.ರಾಂಪುರ ಸೀಮಾಂತರದಲ್ಲಿರುವ ಜಮೀನಿನ ಮೇಲೆ ದಾಳಿ ನಡೆಸಿದಾಗ ಗಾಂಜಾ ಗಿಡ ಬೆಳೆದಿರುವುದು ಪತ್ತೆಯಾಯಿತು. ಈ ಗಾಂಜಾ ಗಿಡಗಳ ಮೌಲ್ಯ ₹2,880 ಆಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಯಾಪಲದಿನ್ನಿ ಠಾಣೆಯ ಪಿಎಸ್‌ಐ ಕರೆಮ್ಮ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ, ಡಿವೈಎಸ್ಪಿ ಶಿವನಗೌಡ ಪಾಟೀಲ ಅವರ ಮಾರ್ಗದರ್ಶನದಲ್ಲಿ ತಂಡ ರಚನೆ ಮಾಡಲಾಗಿತ್ತು.
ತಂಡದಲ್ಲಿ ಸಿಬ್ಬಂದಿ ತಿಪ್ಪಣ್ಣ, ಪಂಪಾಪತಿ, ಗಂಗಪ್ಪ , ಬೂದೆಪ್ಪ , ಮಲ್ಲಯ್ಯ, ನಾಗರಾಜ, ಜಿಂದಪ್ಪ , ಮಲ್ಲಿಕಾರ್ಜುನ, ಶಂಕರ, ವಿನೋದಕುಮಾರ ಹಾಗೂ ಯಾಪಲದಿನ್ನಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸತೀಶಕುಮಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.