ADVERTISEMENT

ಲಿಂಗಸುಗೂರು | ಅನಾಥ ಹೆಣ್ಣು ಶಿಶು ರಕ್ಷಣೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2020, 7:19 IST
Last Updated 19 ಜನವರಿ 2020, 7:19 IST
ಲಿಂಗಸುಗೂರು ತಾಲ್ಲೂಕು ಯಲಗಟ್ಟಾ ಗ್ರಾಮದಲ್ಲಿ ಪತ್ತೆಯಾದ ಹೆಣ್ಣು ಮಗು.
ಲಿಂಗಸುಗೂರು ತಾಲ್ಲೂಕು ಯಲಗಟ್ಟಾ ಗ್ರಾಮದಲ್ಲಿ ಪತ್ತೆಯಾದ ಹೆಣ್ಣು ಮಗು.   
""

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲ್ಲೂಕು ಯಲಗಟ್ಟಾ ಗ್ರಾಮದ ಹೊರವಲಯ ಮರದ‌ ಬುಟ್ಟಿಯಲ್ಲಿ ಬಿಟ್ಟು ಹೋಗಿದ್ದ ಹೆಣ್ಣು ಶಿಶುವನ್ನು ಗ್ರಾಮಸ್ಥರು ಭಾನುವಾರ ಬೆಳಿಗ್ಗೆ ರಕ್ಷಿಸಿದ್ದಾರೆ.

ರಸ್ತೆ ಪಕ್ಕದಲ್ಲಿ ಮಗುವೊಂದು ಅಳುತ್ತಿದ್ದ ಸದ್ದು ಕೇಳಿದ ಗ್ರಾಮಸ್ಥರು ಧಾವಿಸಿ ನೋಡಿದರು. ಬುಟ್ಟಿಯಲ್ಲಿದ್ದ ಮಗುವನ್ನು ಕಂಡು ಮನಕರಗಿ ರಕ್ಷಿಸಿದರು. ಸದ್ಯಕ್ಕೆ ಮಗು ನಗುತ್ತಾ, ಆರೋಗ್ಯವಾಗಿದೆ.ಮಗು ಪತ್ತೆಯಾದ ಬಗ್ಗೆಪೊಲೀಸರಿಗೆ ಮಾಹಿತಿ ನೀಡುತ್ತೇವೆ ಎಂದುಗ್ರಾಮಸ್ಥರು ತಿಳಿಸಿದರು.

ಶಕ್ತಿನಗರ ಬಸ್‌ನಿಲ್ದಾಣದಲ್ಲಿ ಕಂಡು ಬಂದ ಗೋಡೆ ಬರಹ

ಸಿಎಎ ವಿರುದ್ಧ ಗೋಡೆ ಬರಹ

ADVERTISEMENT

ರಾಯಚೂರು ತಾಲ್ಲೂಕಿನ ಶಕ್ತಿನಗರ ಬಸ್ ನಿಲ್ದಾಣ ಹಾಗೂ ಕೆಲವು ವಾಣಿಜ್ಯ ಮಳಿಗೆ ಕಟ್ಟಡಗಳ ಮೇಲೆ ಸಿಎಎ ಜಾರಿಗೊಳಿಸುವುದರ ವಿರುದ್ಧ ಗೋಡೆ ಬರಹ ಮಾಡಲಾಗಿದೆ.

ಯಾರು ಬರೆದಿದ್ದಾರೆ ಎಂಬುದು ಗೊತ್ತಾಗಿಲ್ಲ. ಶನಿವಾರ ತಡರಾತ್ರಿ ಗೋಡೆ ಬರಹ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಜಿಲ್ಲೆಯ ಮಸ್ಕಿ ಪಟ್ಟಣದ ಹೊರವಲಯದ ಐತಿಹಾಸಿಕ ಶಿಲೆಗಳ ಮೇಲೆ ಈಚೆಗೆ ಕಿಡಿಗೇಡಿಗಳು ಇಂಥಗೋಡೆಬರಹಗಳು ಈಚೆಗೆ ಕಂಡು ಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.