ADVERTISEMENT

ಉತ್ತಮ ಆಯ್ಕೆಯಿಂದ ಯಶಸ್ಸು: ಶಶಿಧರ ಕುರೇರ

ವೃತ್ತಿ ಮಾರ್ಗದರ್ಶನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 16:12 IST
Last Updated 24 ಜನವರಿ 2023, 16:12 IST
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಸೋಮವಾರದಿಂದ ಆರಂಭವಾದ ವೃತ್ತಿ ಮಾರ್ಗದರ್ಶನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್‌ ಕುರೇರ ಮಂಗಳವಾರ ಮಾತನಾಡಿದರು.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಸೋಮವಾರದಿಂದ ಆರಂಭವಾದ ವೃತ್ತಿ ಮಾರ್ಗದರ್ಶನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್‌ ಕುರೇರ ಮಂಗಳವಾರ ಮಾತನಾಡಿದರು.   

ರಾಯಚೂರು: ವಿದ್ಯಾರ್ಥಿಗಳ ಜೀವನದಲ್ಲಿ ಆಯ್ಕೆಯು ಅತ್ಯಂತ ಮುಖ್ಯವಾದ ಘಟ್ಟ. ಪ್ರತಿಯೊಬ್ಬರು ತಮ್ಮ ಮುಂದಿನ ಜೀವನವನ್ನು ಗಂಭೀರವಾಗಿ ಪರಿಗಣಿಸಿ,ಉತ್ತಮವಾಗಿ ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಸಲಹೆ ನೀಡಿದರು.

ನಗರದ ಪ್ರೇಕ್ಷಾಗೃಹದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸೆಂಟರ್ ಫಾರ್ ಎಂಪ್ಲಾಯಿಮೆಂಟ್, ಅಪರ‍್ಚುನಿಟೀಸ್ & ಲರ‍್ನಿಂಗ್ (ಸಿಯೋಲ್)ನಿಂದ ಹಮ್ಮಿಕೊಂಡಿದ್ದ ಪದವಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ, ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ಕುರಿತ ಎರಡು ದಿನಗಳ ಕಾರ್ಯಗಾರದಲ್ಲಿ ಎರಡನೇ ದಿನ ಮಂಗಳವಾರ ಮಾತನಾಡಿದರು.

ವಿದ್ಯಾರ್ಥಿಗಳ ಜೀವನದಲ್ಲಿ ಪದವಿ ನಂತರ ಮುಂದಿನ ಓದು ಹಾಗೂ ಜೀವನ ಏನು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು. ಉತ್ತಮ ದೃಷ್ಟಿಕೋನದ ಮೂಲಕ ಜೀವನ ರೂಪಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ತೀರ್ಮಾನ ಮತ್ತು ಆಯ್ಕೆ ಬಹಳ ಮುಖ್ಯ, ಗುರಿ ಯಾವಾಗಲೂ ದೊಡ್ಡದಾಗಿ ಇಟ್ಟಕೊಳ್ಳಿ ಎಂದರು.

ADVERTISEMENT

ನಿಮ್ಮ ಶಕ್ತಿ ಮತ್ತು ಬಲಹೀನತೆ ಬಗ್ಗೆ ಮೊದಲು ನೀವು ತಿಳಿದುಕೊಳ್ಳಿ, ಗುರಿ ಸಲುವಾಗಿ ಪ್ರತಿ ಕ್ಷಣ ಕ್ಷಣ ಹಂಬಲಿಸಬೇಕು. ನಿಮ್ಮ ಓದಿಗೆ ಮನೆ, ಬಡತನ, ಪಠ್ಯ ಪುಸ್ತಕ, ಕಾರಣ ಆಗಬಾರದು, ಪದವಿ ಹಂತದಲ್ಲಿ ನಿರ್ಲಕ್ಷ್ಯ ಮಾಡಿದರೆ ಜೀವನ ಪೋರ್ತಿ ಕಷ್ಟಪಡಬೇಕಾಗುತ್ತದೆ. ಪ್ರತಿ ಒಬ್ಬ ಮನುಷ್ಯ ದೊಡ್ಡ ವ್ಯಕ್ತಿ ಆಗಲು ಸಮಸ್ಯೆ & ತೊಂದರೆಗಳನ್ನು ಎದುರಿಸಬೇಕು. ಇರುವ ಸವಲತ್ತುಗಳನ್ನು ಸದುಪಯೋಗ ಮಾಡಿಕೊಳ್ಳಿ ಎಂದು ಹೇಳಿದರು.

ರಾಯಚೂರು ಉಪವಿಭಾಗಾಧಿಕಾರಿ ರಜನಿಕಾಂತ ಚೌಹಾಣ ಮಾತನಾಡಿ, ಸಮಸ್ಯೆಗಳನ್ನು ಎದುರಿಸಿ ಜೀವನದಲ್ಲಿ ಮುಮದೆ ಬಂದಾಗ ಮಾತ್ರ ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ, ಕೌಶಲಾಭಿವೃದ್ಧಿ ಅಧಿಕಾರಿ ಮೆಹಬೂಬ್ ಜಿಲಾನಿ, ಪ.ಪಂಗಳ ಕಲ್ಯಾಣಾಧಿಕಾರಿ ರಾಜೇಂದ್ರ ಜಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ, ಸಾಧನಾ ಅಕಾಡೆಮಿಯ ವಿಷಯ ತಜ್ಞ ಮಂಜುನಾಥ ಬಿ., ಜಿಲ್ಲಾ ಕಾರ್ಯಕ್ರಮಾಧಿಕಾರಿ ಮಹ್ಮದ್ ಯೂಸೂಫ್ ಅಲಿ, ವೆಂಕಟೇಶ ಗಲಗ, ಶೇಖ್ ಅಲಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.