ADVERTISEMENT

14ರಿಂದ ಮಂತ್ರಾಲಯದಲ್ಲಿ ಗುರು ವೈಭವೋತ್ಸವ

15 ರಂದು ಪಟ್ಟಾಭಿಷೇಕ, 20 ರಂದು ವರ್ಧಂತಿ ಉತ್ಸವ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 12:48 IST
Last Updated 6 ಮಾರ್ಚ್ 2021, 12:48 IST
ಶ್ರೀರಾಘವೇಂದ್ರ ಸ್ವಾಮೀಜಿ
ಶ್ರೀರಾಘವೇಂದ್ರ ಸ್ವಾಮೀಜಿ   

ರಾಯಚೂರು: ಮಂತ್ರಾಲಯದಲ್ಲಿ ಮಾರ್ಚ್ 14ರಿಂದ 20ರವರೆಗೆ ಶ್ರೀರಾಘವೇಂದ್ರ ಗುರು ವೈಭವೋತ್ಸವ ಹಾಗೂ ಸಪ್ತರಾತ್ರೋತ್ಸವ ಕಾರ್ಯಕ್ರಮಗಳು ಜರುಗಲಿವೆ.

ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು 32 ಅಡಿ ಏಕಶಿಲಾ ಶ್ರೀಅಭಯ ಆಂಜನೇಯಸ್ವಾಮಿ ವಿಗ್ರಹವನ್ನು 14 ರಂದು ಅನಾವರಣ ಮಾಡುವರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕರ್ನಾಟಕ ಹೈಕೋರ್ಟ್ ನ್ಯಾಯಾಮೂರ್ತಿಗಳಾದ ಅರವಿಂದ ಕುಮಾರ, ವಿ.ಶ್ರೀಶಾನಂದ, ಕೆ. ನಟರಾಜನ್, ಆಂಧ್ರಪ್ರದೇಶ ಹೈಕೋರ್ಟ್‍ನ ನ್ಯಾಯಮೂರ್ತಿ ಉಮಾದೇವಿ ಹಾಗೂ ದಾನಿಗಳಾದ ಬೆಂಗಳೂರಿನ ಜಿ. ಕೃಷ್ಣಮೂರ್ತಿ ಮತ್ತು ಕುಟುಂಬದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಶ್ರೀರಾಘವೇಂದ್ರ ಸ್ವಾಮಿಗಳ ಮಠದಿಂದ ಅಭಿನಂದನಾ ಮತ್ತು ಅಭಿವಂದನಾ ಕಾರ್ಯಕ್ರಮವು ಪ್ರತಿದಿನ ಸಂಜೆ 7 ಗಂಟೆಗೆ ನಡೆಯಲಿದ್ದು, ವಿದ್ವಾಂಸರು, ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಗುತ್ತಿದೆ. 14ರಂದು ಸಿರಿಮನಿ ವಿದ್ವಾನ್ ರಾಮಕೃಷ್ಣಾಚಾರ್ ಗಣಪತಿಗಳ್, 15 ರಂದು ತಿರುಪತಿಯ ಶ್ರೀನಿವಾಸ ಗಣಪತಿಗಳ್, 16ರಂದು ರಾಯಚೂರಿನ ಮುರಳೀಧರಾಚಾರ್ ಗಲಗಲಿ, 17ರಂದುಬೆಂಗಳೂರಿನ ಮೋಹನಾಚಾರ್, 18ರಂದು ಬಿರದಹಳ್ಳಿಯ ಕೃಷ್ಣಾಚಾರ್,19ರಂದು ತಿರುಪತಿಯ ಡಾ.ಶ್ರೀಪಾದ ಸತ್ಯನಾರಾಯಣಮೂರ್ತಿ ಅವರನ್ನು ಸನ್ಮಾನಿಸಲಾಗುತ್ತಿದೆ.

ADVERTISEMENT

ರಾಜ್ಯ ಸಹಕಾರ ಖಾತೆ ಸಚಿವ ಎಸ್.ಟಿ ಸೋಮಶೇಖರ, ಅರಣ್ಯ ಖಾತೆ ಸಚಿವ ಅರವಿಂದ ಲಿಂಬಾವಳಿ, ಅಬಕಾರಿ ಸಚಿವ ಎಂ.ಟಿ.ಬಿ ನಾಗರಾಜ, ಮಂತ್ರಾಲಯದ ಶಾಸಕ ವೈ.ಬಾಲನಾಗಿರೆಡ್ಡಿ, ಬೆಂಗಳೂರಿನ ಆರ್.ಆರ್ ನಗರದ ಶಾಸಕ ಮುನಿರತ್ನ, ಆಂಧ್ರಪ್ರದೇಶದ ಪಂಚಾಯತ್ ರಾಜ್ ಇಲಾಖೆ ಆಯುಕ್ತ ಗಿರಿಜಾ ಶಂಕರ, ಹನುಮಂತರಾವ್, ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್ ಜವಾಹರರೆಡ್ಡಿ ಸೇರಿದಂತೆ ಅನೇಕ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಸನ್ಮಾನಿಸಲಾಗುತ್ತಿದೆ.

20ರಂದು ಶ್ರೀರಾಘವೇಂದ್ರ ಸ್ವಾಮಿಗಳ ವರ್ಧಂತಿ ಉತ್ಸವದ ಅಂಗವಾಗಿ ತಿರುಪತಿ ತಿರುಮಲ ದೇವಸ್ಥಾನದಿಂದ ತರುವ ಶ್ರೀನಿವಾಸ ದೇವರ ಶೇಷವಸ್ತ್ರಗಳನ್ನು ಮೆರವಣಿಗೆ ಮೂಲಕ ಶ್ರೀಮಠಕ್ಕೆ ತಂದು ವೃಂದಾವನಕ್ಕೆ ಸಮರ್ಪಣೆ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.