ಸಿರವಾರ: ತಾಲ್ಲೂಕಿನ ಹರವಿ ಗ್ರಾಮದಲ್ಲಿ ಗುರುವಾರ ರಾತ್ರಿ ಕಿಡಿಗೇಡಿಗಳು ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಯ ಕನ್ನಡಕ ಮುರಿದು ಅಪಮಾನ ಮಾಡಿದ್ದಾರೆ.
ಗ್ರಾಮಸ್ಥರು ಶುಕ್ರವಾರ ಬೆಳಿಗ್ಗೆ ಇದನ್ನು ನೋಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ತಹಶೀಲ್ದಾರ್ ರವಿ ಎಸ್.ಅಂಗಡಿ ಮತ್ತು ಸಿಪಿಐ ಎಂ.ಶಶಿಕಾಂತ ಭೇಟಿ ನೀಡಿ ಮಾಹಿತಿ ಪಡೆದರು.
ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹಾಗೂ ಪ್ರಗತಿ ಪರ ಹೋರಾಟಗಾರರು ಮಾನ್ವಿ–ಸಿರವಾರ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಕೂಡಲೇ ಕಿಡಿಗೇಡಿಗಳನ್ನು ಪತ್ತೆ ಮಾಡಿ ಕಠಿಣ ಕ್ರಮಕೈಗೊಳ್ಳುವುದಾಗಿ ತಹಶೀಲ್ದಾರ್ ಮತ್ತು ಸಿಪಿಐ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.
ಮುಖಂಡರಾದ ಪ್ರಭುರಾಜ ಕೊಡ್ಲಿ, ತಿಪ್ಪಣ್ಣ ಬಾಗಲವಾಡ, ದತ್ತಣ್ಣ, ರವಿಕುಮಾರ, ಯಲ್ಲಪ್ಪ ಬಾದರದಿನ್ನಿ, ಜಾನೇಕಲ್ ಶಿವರಾಜ, ಬಸ್ಸಪ್ಪ ಹರವಿ, ಶಶಿಧರಗೌಡ ಹರವಿ, ಪೋಮಣ್ಣ, ಮೌನೇಶ, ಅಬ್ರಾಹಂ ಹೊನ್ನಟಗಿ, ಭೀಮಣ್ಣ ನಾಯಕ, ವೀರೇಶ, ಜಿ.ಶಿವಪ್ಪ ಹರವಿ ಹಾಗೂ ಎನ್.ಬಸವರಾಜ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.