ADVERTISEMENT

ರಿಮ್ಸ್‌ನಲ್ಲಿ ಆರೋಗ್ಯ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 13:13 IST
Last Updated 8 ಏಪ್ರಿಲ್ 2020, 13:13 IST
ರಾಯಚೂರಿನ ರಿಮ್ಸ್‌ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್‌ನಿಂದ ಮಂಗಳವಾರ ಆರೋಗ್ಯ ದಿನ ಆಚರಿಸಿ, ವೈದ್ಯರನ್ನು ಸನ್ಮಾನಿಸಲಾಯಿತು
ರಾಯಚೂರಿನ ರಿಮ್ಸ್‌ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್‌ನಿಂದ ಮಂಗಳವಾರ ಆರೋಗ್ಯ ದಿನ ಆಚರಿಸಿ, ವೈದ್ಯರನ್ನು ಸನ್ಮಾನಿಸಲಾಯಿತು   

ರಾಯಚೂರು: ನಗರದ ರಿಮ್ಸ್‌ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್‌ (ಮೇನ್)ರಾಯಚೂರು ವಂತಿಯಿಂದ ಮಂಗಳವಾರ ವೈದ್ಯರ ಆರೋಗ್ಯ ದಿನ ಆಚರಿಸಲಾಯಿತು.

ರಿಮ್ಸ್ ಕರೋನ ವೈರಸ್ ವಿಭಾಗದ ಮುಖ್ಯಸ್ಥ ಡಾ.ಅರುಣ್ ಮಸ್ಕಿ, ಡಾ ಅಬ್ದುಲ್ ಕಲ್ ಬಹದ್ದೂರ್ ಅವರಿಗೆ ಹೂಗುಚ್ಛ ನೀಡಿ ಗೌರವಿಸಲಾಯಿತು.

ರೋಟರಿ ಕ್ಲಬ್‌ ನಿರ್ದೇಶಕ ಎನ್. ಶಿವಶಂಕರ ಮಾತನಾಡಿ, ಎಲ್ಲ ಭಾಗದಲ್ಲಿ ಕೊರೊನಾ ವೈರಸ್ ಹರಡದಂತೆ ಹಗಲಿರುಳೂ ವೈದರು, ನರ್ಸ್‌ಗಳು ಸಚ್ಛತೆ ಸಿಬ್ಬಂದಿ ಸೇವೆ ಸಲ್ಲಿಸಿತ್ತಿದ್ದಾರೆ. ಈ ಸೇವೆ ದೇವರ ಸೇವೆ ವೈದ್ಯರ ಜೊತೆ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುವ ದಾದಿಯರ ಮತ್ತು ಶುಶ್ರೂಷಕಿಯರ ಸೇವೆಯ ಮಹತ್ವದ್ದಾಗಿದೆ ಎಂದರು.

ADVERTISEMENT

ರಿಮ್ಸ್ ಕಾಲೇಜು ಪ್ರಿನ್ಸಿಪಾಲ್‌ ಡಾ.ಬಸವರಾಜ ಪಾಟೀಲ ಮಾತನಾಡಿದರು. ರಿಮ್ಸ್ ಜಿಲ್ಲಾ ಶಸ್ತ್ರ ಚಿಕಿತ್ಸೆ ಡಾ ವಿಜಯಶಂಕರ, ರೋಟರಿ ಕಾರ್ಯದರ್ಶಿ ವಿಜಯಕುಮಾರ ಸಜ್ಜನ, ರೋಟರಿ ನಿರ್ದೇಶಕ ಡಿ. ಜಿ.ಯಶವಂತ್, ಮೃತ್ಯುಂಜಯ ಮಾಚನೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.