ADVERTISEMENT

‘ದೇವೇಂದ್ರ ಹೆಗಡೆ ಜೀವನ ಎಲ್ಲರಿಗೂ ಮಾದರಿ’

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 3:07 IST
Last Updated 30 ಸೆಪ್ಟೆಂಬರ್ 2025, 3:07 IST
ದೇವದುರ್ಗ ಪಟ್ಟಣದ ಮುರಿಗೆಪ್ಪ ಖೆಣೇದ್ ಫಂಕ್ಷನ್ ಹಾಲ್‌ನಲ್ಲಿ ದೇವೇಂದ್ರ ಹೆಗಡೆ ಅವರ ನುಡಿ ನಮನ ಕಾರ್ಯಕ್ರಮ ನಡೆಯಿತು
ದೇವದುರ್ಗ ಪಟ್ಟಣದ ಮುರಿಗೆಪ್ಪ ಖೆಣೇದ್ ಫಂಕ್ಷನ್ ಹಾಲ್‌ನಲ್ಲಿ ದೇವೇಂದ್ರ ಹೆಗಡೆ ಅವರ ನುಡಿ ನಮನ ಕಾರ್ಯಕ್ರಮ ನಡೆಯಿತು   

ದೇವದುರ್ಗ: ‘ದೇವೇಂದ್ರ ಹೆಗಡೆಯವರ ಅಕಾಲಿಕ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಚಿಂತನೆ ಎಲ್ಲರಿಗೂ ಆದರ್ಶವಾಗಲಿದೆ’ ಎಂದು ಬಹುಜನ ಚಿಂತಕ ಎಂ.ಆರ್.ಭೇರಿ ಹೇಳಿದರು.

ಪಟ್ಟಣದ ಮುರಿಗೆಪ್ಪ ಖೆಣೇದ್ ಫಂಕ್ಷನ್ ಹಾಲ್‌ನಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಸಮಿತಿಯ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ ದೇವೇಂದ್ರ ಹೆಗಡೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ರಾಜ್ಯದಲ್ಲಿ ದಲಿತ ಚುಳವಳಿ ಮತ್ತು ಸಂಘಟನೆಗೆ ದೇವೇಂದ್ರ ಹೆಗಡೆ ಪ್ರೇರಣೆಯಾಗಿದ್ದಾರೆ. ಶೋಷಿತರ, ತಳ ಸಮುದಾಯಗಳ, ದೌರ್ಜನ್ಯಕ್ಕೆ ಒಳಗಾದವರ ಧ್ವನಿಯಾಗಿದ್ದರು. ದಲಿತ ಸಂಘರ್ಷ ಸಮಿತಿ ಸಂಘಟನೆ, ಬೌದ್ಧ ಧರ್ಮದ ಪ್ರಚಾರ ಮತ್ತು ಪ್ರಸಾರಕ್ಕೆ ತಮ್ಮ ಜೀವನವನ್ನೇ ಪಣಕ್ಕಿಟ್ಟು ಸಲ್ಲಿಸಿರುವ ಸೇವೆ ಸ್ಮರಣೀಯ’ ಎಂದು ಹೇಳಿದರು.

ADVERTISEMENT

ಮರಿಲಿಂಗಪ್ಪ ಕೋಳೂರ ಮಾತನಾಡಿ,‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಬೌದ್ಧ, ಜಾತಿ ಕಾಲಂನಲ್ಲಿ ತಾವು ಹೊಂದಿರುವ ಜಾತಿ ನಮೂದಿಸಲು ಅವಕಾಶ ಕಲ್ಪಿಸುವಂತೆ ಕೋರ್ಟ್ ಮೊರೆ ಹೋಗಿದ್ದರು. ಅವರ ಆಶಯದಂತೆ ತೀರ್ಪು ಬಂದಿತ್ತು. ಸಮೀಕ್ಷೆ ಆರಂಭಕ್ಕೂ ಮುನ್ನ ನಮ್ಮನ್ನ ಅಗಲಿದರು’ ಎಂದರು.

ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನರಸಿಂಗರಾವ್ ಸರಕೀಲ್, ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ, ಕಸಾಪ ತಾಲ್ಲೂಕು ಅಧ್ಯಕ್ಷ ಎಚ್.ಶಿವರಾಜ, ಹಿಂದುಳಿದ ವರ್ಗಗಳ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಶರಣಗೌಡ ಸುಂಕೇಶ್ವರಹಾಳ, ಶಂಕರರಾವ್ ಉಭಾಳೆ, ಕಸಾಪ ಗೌರವ ಕಾರ್ಯದರ್ಶಿ ತಾಯಪ್ಪ ಹೊಸೂರು, ಚುಟುಕು ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಬಸವರಾಜ ಬ್ಯಾಗವಾಟ ಹಾಗೂ ಮುಖಂಡ ಮಲ್ಲೇಶಪ್ಪ ಹುನುಗುಂದಬಾಡ ಮಾತನಾಡಿದರು.

ಎಪಿಎಂಸಿ ನಿರ್ದೇಶಕ ರಂಗಪ್ಪ ಗೋಸಲ್, ಛಲವಾದಿ ಮಹಾಸಭಾದ ತಾಲ್ಲೂಕು ಸಮಿತಿ ಅಧ್ಯಕ್ಷ ಮಹಾಂತೇಶ ಭವಾನಿ, ಜಾಗತಿಕ ಲಿಂಗಾಯತ ಮಹಾಸಭಾದ ತಾಲ್ಲೂಕು ಸಮಿತಿ ಅಧ್ಯಕ್ಷ ಬಸವರಾಜ ನಾಯಕ ಮಸ್ಕಿ, ಎಪಿಎಂಸಿ ಮಾಜಿ ನಿರ್ದೇಶಕ ಶಿವರಾಜ ಗೆಜ್ಜೆಬಾವಿ, ಮಲ್ಲಯ್ಯ ಕಟ್ಟಿಮನಿ, ಮಲ್ಲೇಶ ಬೊಮ್ಮನಾಳ, ಪ್ರಕಾಶ ಪಾಟೀಲ ಅಮರಾಪುರ, ಮಾರ್ಕಂಡೇಯ ನಾಡದಾಳ, ಯಮನೇಶ ಗೌಡಿಗೇರಾ, ನಾಗರಾಜ ತೇಲ್ಕರ್, ಗುರುನಾಥ ಇಂಗಳದಾಳ, ಮಾನಶಯ್ಯ ಪಂಥ, ಉಪನ್ಯಾಸಕ ವಿರೂಪಣ್ಣ ಬಾಗೂರು, ಚಂದ್ರಶೇಖರ ಚಲವಾದಿ, ಶಿವರಾಜ ರುದ್ರಾಕ್ಷಿ, ರಂಗನಾಥ ಛಲವಾದಿ, ಬಸವರಾಜ ಕೊಪ್ಪರ, ಅಮರಯ್ಯ ತಾತ ಅರಿಷಿಣಿಗಿ, ಚಿದಾನಂದ ಶಾವಂತಗೇರಾ, ಪಿಡಿಒ ದೇವರಾಜ, ನರಸಪ್ಪ ವಕೀಲ, ಆಂಜನೇಯ ಬಡಿಗೇರ, ಪರಮಾನಂದ ಸುಂಕೇಶ್ವರಹಾಳ, ವಿನೋದ ನಾಯಕ ಹಿರೇಬೂದೂರು, ನಿರಂಜನ ಮತ್ತು ಶಿಕ್ಷಕ ಚನ್ನಬಸವ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.