ADVERTISEMENT

ರಜೆ: ಮಂತ್ರಾಲಯಕ್ಕೆ ಹರಿದು ಬರುತ್ತಿರುವ ಭಕ್ತರು– ವಸತಿ ಸೌಲಭ್ಯಕ್ಕೆ ತೊಡಕು

ಕ್ರಿಸ್‌ಮಸ್ ಮತ್ತು ಹೊಸ ವರ್ಷದ ರಜೆ ಇರುವ ಕಾರಣ ಮಂತ್ರಾಲಯ ಮಠಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2024, 12:53 IST
Last Updated 24 ಡಿಸೆಂಬರ್ 2024, 12:53 IST
<div class="paragraphs"><p>ಮಂತ್ರಾಲಯ</p></div>

ಮಂತ್ರಾಲಯ

   

ರಾಯಚೂರು: ಕ್ರಿಸ್‌ಮಸ್ ಮತ್ತು ಹೊಸ ವರ್ಷದ ರಜೆ ಇರುವ ಕಾರಣ ಮಂತ್ರಾಲಯ ಮಠಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಡಿ.25ರಿಂದ ಜನವರಿ 2ರ ವರೆಗೆ ಇಲ್ಲಿ ಬರುವ ಎಲ್ಲರಿಗೂ ವಸತಿ ಸೌಲಭ್ಯ ಕಲ್ಪಿಸಲು ಕಷ್ಟವಾಗಲಿದೆ ಎಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ.

ಭಕ್ತರು ಈಗಾಗಲೇ ಕೊಠಡಿಗಳಿಗೆ ಆನ್‌ಲೈನ್ ಬುಕಿಂಗ್ ಕಾಯ್ದಿರಿಸಿದ್ದಾರೆ. ಇಷ್ಟೇ ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಕೊಠಡಿ ಹಂಚಿಕೆಗಾಗಿ ದಾನಿಗಳಿಂದ ಡೋನರ್ಸ್ ಕೂಪನ್‌ಗಳನ್ನು ಸ್ವೀಕರಿಸಲಾಗಿದೆ. ಭಕ್ತರು ಮತ್ತು ಶಿಷ್ಯರ ಹೆಚ್ಚಿನ ಒಳಹರಿವನ್ನು ನಿರೀಕ್ಷಿಸುತ್ತಿರುವುದರಿಂದ ಸಾಮಾನ್ಯ ಜನರಿಂದ ಆಫ್‌ಲೈನ್ ಬುಕಿಂಗ್ ನೋಡಿಕೊಳ್ಳುವುದೂ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಇದೇ ಸಮಯದಲ್ಲಿ, ಪ್ರೋಟೋಕಾಲ್ ಮಾನದಂಡಗಳ ಪ್ರಕಾರ ನಾವು ವಿವಿಐಪಿಗಳನ್ನು ನೋಡಿಕೊಳ್ಳಬೇಕಾಗಲಿದೆ. ಪೀಕ್ ದಿನಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸಲು ಭಕ್ತರು ಕೊನೆಯ ಗಂಟೆಯ ವಿನಂತಿ, ಶಿಫಾರಸು ಪತ್ರಗಳಿಗೆ ಸ್ಪಂದಿಸುವುದು ಕಷ್ಟವಾಗಲಿದೆ. ಭಕ್ತರು ಹಾಗೂ ಶಿಷ್ಯರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.