ADVERTISEMENT

ರಾಜಾ ಎಸ್. ಗಿರಿಯಾಚಾರ್ಯರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಇಂದು

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 14:27 IST
Last Updated 31 ಜುಲೈ 2019, 14:27 IST
ರಾಜಾ ಎಸ್. ಗಿರಿಯಾಚಾರ್ಯ
ರಾಜಾ ಎಸ್. ಗಿರಿಯಾಚಾರ್ಯ   

ರಾಯಚೂರು: ಬೆಂಗಳೂರಿನ ವರ್ಚ್ಯುವಲ್ ಅಕಾಡೆಮಿ ಫಾರ್ ಪೀಸ್ & ಎಜ್ಯುಕೇಶನ್ ಖಾಸಗಿ ವಿಶ್ವವಿದ್ಯಾಲಯದಿಂದ ಮಂತ್ರಾಲಯದ ವಿದ್ವಾನ್ ರಾಜಾ ಎಸ್. ಗಿರಿಯಾಚಾರ್ಯರಿಗೆ ಗೌರವ ಡಾಕ್ಟರೇಟ್ ಹಾಗೂ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು, ಇದರ ಸಮಾರಂಭವು ಮಂತ್ರಾಲಯದಲ್ಲಿ ಆಗಸ್ಟ್‌ 1 ರ ಸಂಜೆ ಆರು ಗಂಟೆಗೆ ಶ್ರೀ ವೇದವ್ಯಾಸ ಸಾಹಿತ್ಯ ಸಮನ್ವಯ ಸಂಶೋಧನಾಲಯ ಸಹಯೋಗದಲ್ಲಿ ನಡೆಯಲಿದೆ.

ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಸಾನ್ನಿಧ್ಯ ವಹಿಸುವರು. ಮಂತ್ರಾಲಯದ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಕುಲಪತಿ ಡಾ.ವಿ.ಆರ್.ಪಂಚಮುಖಿ, ಕಾರ್ಯನಿರ್ವಾಹಕ ಸಮಿತಿ ಸದಸ್ಯ ಡಾ.ಕೆ.ಆರ್.ರವಿಕುಮಾರ್, ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಡಾ.ಗುರುರಾಜ್ ಪೋಶೆಟ್ಟಿಹಳ್ಳಿ, ಬೆಂಗಳೂರಿನಿನ ಬಿಎಚ್‌ಎಸ್ ಶಿಕ್ಷಣ ಸಂಸ್ಥೆಗಳ ಸಮಿತಿ ಜಂಟಿ ಕಾರ್ಯದರ್ಶಿ ಡಾ.ಸಮೀರ್ ಸಿಂಹ ಕೆ.ಎಸ್, ಹರಿದಾಸ ಸಾಹಿತ್ಯ ಸಂಶೋಧಕ ಡಾ.ಅನಂತ ಪದ್ಮನಾಭರಾವ್ ಪಾಲ್ಗೊಳ್ಳುವರು.

ಷಟ್‌ಶಾಸ್ತ್ರಗಳಲ್ಲಿ ಸಂಪಾದಿಸಿದ ಆಳವಾದ ಜ್ಞಾನ, ಪಾಠಪ್ರವಚನ, ವಾಕ್ಯಾರ್ಥಗೋಷ್ಠಿ, ಅನೇಕ ಅಪೂರ್ವ ಹಸ್ತಪ್ರತಿ ಸಂಗ್ರಹ, ನೂರಾರು ಗ್ರಂಥಸಂಪಾದನೆ, ಪ್ರಕಾಶನ, ತತ್ತ್ವಜ್ಞಾನ ಪ್ರಸಾರ, ಪ್ರಾಚೀನ ಭಾರತೀಯ ಶಾಸ್ತ್ರ ಪರಂಪರೆಯ ಸಂರಕ್ಷಣೆ ಮುಂತಾದ ಬಹುಮುಖ ಸಾಧನೆಗಳನ್ನು ಪರಿಗಣಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.