ADVERTISEMENT

ಭಾರತ ಉಳಿದಿರುವುದೇ ಬಹುತ್ವದ ಮೇಲೆ: ಕೆ.ಪ್ರಕಾಶ ಹೇಳಿಕೆ

ಸಿಪಿಐಎಂ ರಾಜ್ಯ ಘಟಕದ ಕಾರ್ಯಕಾರಿಣಿ ಮಂಡಳಿ ಸದಸ್ಯ ಕೆ.ಪ್ರಕಾಶ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಮೇ 2022, 11:43 IST
Last Updated 1 ಮೇ 2022, 11:43 IST
ಸಿಂಧನೂರಿನ ಹಳೆಬಜಾರ್‌ನಲ್ಲಿರುವ ಮಸ್ಜೀದ್ ಏ ಹುದಾದಲ್ಲಿ ಸಿಪಿಐ, ಸಿಪಿಐಎಂ ಹಾಗೂ ಸಿಪಿಐಎಂಎಲ್ ಲಿಂಬರೇಶನ್ ಸಹಯೋಗದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಸಿಪಿಐಎಂ ರಾಜ್ಯ ಘಟಕದ ಕಾರ್ಯಕಾರಿಣಿ ಮಂಡಳಿ ಸದಸ್ಯ ಕೆ.ಪ್ರಕಾಶ ಮಾತನಾಡಿದರು
ಸಿಂಧನೂರಿನ ಹಳೆಬಜಾರ್‌ನಲ್ಲಿರುವ ಮಸ್ಜೀದ್ ಏ ಹುದಾದಲ್ಲಿ ಸಿಪಿಐ, ಸಿಪಿಐಎಂ ಹಾಗೂ ಸಿಪಿಐಎಂಎಲ್ ಲಿಂಬರೇಶನ್ ಸಹಯೋಗದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಸಿಪಿಐಎಂ ರಾಜ್ಯ ಘಟಕದ ಕಾರ್ಯಕಾರಿಣಿ ಮಂಡಳಿ ಸದಸ್ಯ ಕೆ.ಪ್ರಕಾಶ ಮಾತನಾಡಿದರು   

ಸಿಂಧನೂರು: ವಿವಿಧತೆಯಲ್ಲಿ ಏಕತೆ ಹೊಂದಿದ ಭಾರತ ಬಹುಸಂಸ್ಕೃತಿಗಳ ದೇಶವಾಗಿದ್ದು, ಬಹುತ್ವದ ಮೇಲೆ ಭಾರತ ಉಳಿದಿದೆ. ಸಂವಿಧಾನವೇ ಈ ದೇಶದ ಮೂಲಬೇರಾಗಿದೆ ಎಂದು ಸಿಪಿಐಎಂ ರಾಜ್ಯ ಘಟಕದ ಕಾರ್ಯಕಾರಿಣಿ ಮಂಡಳಿ ಸದಸ್ಯ ಕೆ.ಪ್ರಕಾಶ ಅಭಿಪ್ರಾಯಪಟ್ಟರು.

ನಗರದ ಹಳೆಬಜಾರ್‌ನಲ್ಲಿರುವ ಮಸ್ಜೀದ್ ಏ ಹುದಾದಲ್ಲಿ ಸಿಪಿಐ, ಸಿಪಿಐಎಂ ಹಾಗೂ ಸಿಪಿಐಎಂಎಲ್ ಲಿಂಬರೇಶನ್ ಸಹಯೋಗದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಅವರು ಮಾತನಾಡಿದರು.

ಬಾಬಾಸಾಹೇಬ್ ಅಂಬೇಡ್ಕರ್ ಅವರು ಧರ್ಮದ ಆಧಾರದ ಮೇಲೆ ಸಂವಿಧಾನವನ್ನು ರಚನೆ ಮಾಡಿಲ್ಲ. ಭಾರತೀಯರು ಎಂಬ ವಿಶಾಲ ಪರಿಕಲ್ಪನೆಯ ಮೇಲೆ ರಚಿಸಿದ್ದಾರೆ. ಆದರಿಂದ ಕೋಮುವಾದಿ ಫ್ಯಾಸಿಸ್ಟ್ ಶಕ್ತಿಗಳು ದೇಶದಲ್ಲಿ ಒಂದು ಧರ್ಮಿಯರನ್ನು ಗುರಿಯಾಸಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಇದನ್ನು ಎಲ್ಲ ಎಡಪಕ್ಷಗಳು ಬಲವಾಗಿ ಖಂಡಿಸಬೇಕು ಎಂದರು.

ADVERTISEMENT

ರಾಜ್ಯ ಮತ್ತು ದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪ್ರಭುತ್ವ ಸಂವಿಧಾನಕ್ಕೆ ವಿರುದ್ಧವಾಗಿ ಆಡಳಿತ ನಡೆಸುತ್ತಿದೆ. ಸಂವಿಧಾನ ಬದಲಾವಣೆ ಮಾಡುವುದಕ್ಕಾಗಿಯೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂಬ ಹೇಳಿಕೆಗಳನ್ನು ಬಹಿರಂಗವಾಗಿ ನೀಡಿದ್ದಾರೆ. ಇಂಥವರಿಂದ ದೇಶ ಸುಧಾರಣೆ ಆಗುವುದಿಲ್ಲ. ಸಂವಿಧಾನ ಇರುವುದರಿಂದಲೇ ಅಧಿಕಾರ ನಡೆಸುತ್ತಿದ್ದೇವೆಂಬ ಕನಿಷ್ಠ ಪರಿಜ್ಞಾನ ಅವರಿಗಿಲ್ಲ. ಎಡಪಕ್ಷಗಳು ಎಂದಿಗೂ ಅಧಿಕಾರಕ್ಕಾಗಿ ಆಸೆ ಪಟ್ಟಿಲ್ಲ. ಆದರೆ ಜನರ ನೆಮ್ಮದಿಯ ಬದುಕಿಗೆ ಪ್ರಾಣ ಕೊಡಲು ಸಿದ್ಧ ಇವೆ ಎಂದು ತೋರಿಸಿಕೊಟ್ಟಿವೆ ಎಂದು ಹೇಳಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಾಷುಮಿಯಾ ಮಾತನಾಡಿ, ಕೋಮು ಸೌಹಾರ್ದತೆಯನ್ನು ಕದಡುತ್ತಿರುವ ಶಕ್ತಿಗಳ ವಿರುದ್ಧ ಮೇ ತಿಂಗಳಲ್ಲಿ ಉಡುಪಿಯಲ್ಲಿ ಸಾಮರಸ್ಯ ನಡಿಗೆ ಕಾರ್ಯಕ್ರಮ, ಭಾವೈಕ್ಯತೆಯ ಸಂಕೇತವಾದ ತಿಂಥಿಣಿಯಲ್ಲಿಯೂ ಮೇ 14 ರಿಂದ ಮೂರು ದಿನಗಳ ಕಾಲ ಸಾಂಸ್ಕೃತಿಕ ಪ್ರತಿರೋಧ ಸಮಾವೇಶ. ಮೇ 3 ರಂದು ಸಿಂಧನೂರಿನಲ್ಲಿ ಹಿಂದೂ-ಮುಸ್ಲಿಮರು ಒಗ್ಗೂಡಿ ಬಸವ ಜಯಂತಿ ಮತ್ತು ರಂಜಾನ್ ಆಚರಣೆ, ಮೇ 8 ರಂದು ಸಿಂಧನೂರಿನಲ್ಲಿ ಬಹುತ್ವ ಭಾರತೀಯರ ಭಾವೈಕ್ಯ ಸಮಾವೇಶವನ್ನು ಏರ್ಪಡಿಸಿದೆ.

ವೀರಶೈವ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕಗೌಡ ಗದ್ರಟಗಿ ಮಾತನಾಡಿದರು. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ವೀರೇಶ, ತಾಲ್ಲೂಕು ಕಾರ್ಯದರ್ಶಿ ಶೇಕ್ಷಾಖಾದ್ರಿ, ಮಸೀದ್ ಕಮಿಟಿಯ ಅಧ್ಯಕ್ಷ ಖಾನ್‍ಸಾಬ್ ಇದ್ದರು. ನಾಗರಾಜ ಪೂಜಾರ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.