ADVERTISEMENT

‘ವಿಭೂತಿಯಿಂದ ಧನಾತ್ಮಕ ಶಕ್ತಿ ಹೆಚ್ಚಳ’

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2023, 6:29 IST
Last Updated 20 ಅಕ್ಟೋಬರ್ 2023, 6:29 IST
ಲಿಂಗಸುಗೂರು ರೇಣುಕಾ ಬಡಾವಣೆ ಮಹಿಳೆಯರು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ ಇಷ್ಟಲಿಂಗ ಪೂಜೆಗೆ ಗುರುವಾರ ಅಗ್ರೋದಕ ಕುಂಭ ಮೆರವಣಿಗೆ ತಂದು ಸಮರ್ಪಿಸಿದರು.
ಲಿಂಗಸುಗೂರು ರೇಣುಕಾ ಬಡಾವಣೆ ಮಹಿಳೆಯರು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ ಇಷ್ಟಲಿಂಗ ಪೂಜೆಗೆ ಗುರುವಾರ ಅಗ್ರೋದಕ ಕುಂಭ ಮೆರವಣಿಗೆ ತಂದು ಸಮರ್ಪಿಸಿದರು.   

ಲಿಂಗಸುಗೂರು: ‘ವಿಭೂತಿಗೆ ಧಾರ್ಮಿಕ ಮಹತ್ವ ನೀಡುತ್ತಾ ಬರಲಾಗಿದೆ. ವೈಜ್ಞಾನಿಕವಾಗಿ ನೋಡಿದಾಗ ನಕಾರಾತ್ಮಕ ಶಕ್ತಿಗಳನ್ನು ನಿಗ್ರಹಿಸುವ ಜೊತೆಗೆ ದೈಹಿಕ ಸಹಿಷ್ಣುತೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಗುರುವಾರ ಇಷ್ಟಲಿಂಗ ಪೂಜೆ ಮಾಡಿ ಮಾತನಾಡಿದ ಅವರು, ‘ವಿಭೂತಿ ಕೇವಲ ದೇವರ ಪೂಜೆಗೆ ಬಳಸುವ ವಸ್ತುವಲ್ಲ. ವಿಭೂತಿ ಧಾರಣೆ ಮಾಡುವುದರಿಂದ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು.

ಅಗ್ರೋದಕ: ರೇಣುಕಾ ನಗರದ ಮಹಿಳೆಯರು ಗುರುವಾರ ರೇಣುಕಾದೇವಿ ದೇವಸ್ಥಾನದಿಂದ ಅಗ್ರೋದಕ ಕುಂಭ ಹೊತ್ತು ಭಾಜಾ ಭಜಂತ್ರಿ ಸಮೇತ ಮೆರವಣಿಗೆ ಮೂಲಕ ಈಶ್ವರ ದೇವಸ್ಥಾನಕ್ಕೆ ಆಗಮಿಸಿ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ ಇಷ್ಟಲಿಂಗ ಪೂಜೆಗೆ ನೀಡಿದರು.

ADVERTISEMENT

ಎಡೆಯೂರಿನ ರೇಣುಕ ಶಿವಾಚಾರ್ಯ ಸ್ವಾಮೀಜಿ, ದೇವರಭೂಪುರದ ಅಭಿನವ ಗಜದಂಡ ಶಿವಾಚಾರ್ಯರು, ಮುಕ್ತಿಮಂದಿರದ ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯರು, ಸುಳ್ಯದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಹಂಪಸಾಗರದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯರು, ಕನ್ನೂರಿನ ಸೋಮನಾಥ ಶಿವಾಚಾರ್ಯರು, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು.

ಲಿಂಗಸುಗೂರು ಈಶ್ವರ ದೇವಸ್ಥಾನದಲ್ಲಿ ಆಯೋಜಿಸಿದ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ ಇಷ್ಟಲಿಂಗ ಪೂಜೆಯಲ್ಲಿ ಗುರುವಾರ ಮರಳಿ ನಾಗಭೂಷಣ ಶಿವಾಚಾರ್ಯರು ಪಾದಪೂಜೆ ನೆರವೇರಿಸಿದರು
ಲಿಂಗಸುಗೂರು ಈಶ್ವರ ದೇವಸ್ಥಾನದಲ್ಲಿ ಆಯೋಜಿಸಿದ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ ಇಷ್ಟಲಿಂಗ ಪೂಜೆಯಲ್ಲಿ ಗುರುವಾರ ಭಾಗವಹಿಸಿದ್ದ ಭಕ್ತ ಸಮೂಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.