ಮುದಗಲ್: ಸಮೀಪದ ನಾಗಲಾಪುರ ಗ್ರಾಮ ಪಂಚಾಯಿತಿಯಲ್ಲಿ 1800 ನರೇಗಾ ಕೂಲಿ ಕಾರ್ಮಿಕರಿಗೆ ಕೂಲಿ ಪಾವತಿಯಾಗದೇ ನಿರ್ಲಕ್ಷ್ಯ ತೋರಿದ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನರೇಗಾ ಕೂಲಿಕಾರರು ಅನಿರ್ಧಿಷ್ಟಾವಧಿ ಇರುವದಕ್ಕೆ ಧರಣಿ ನಡೆಸಿದರು.
ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ನೀಡಿದ ಭರವಸೆ ಈಡೇರಿಲ್ಲ. ಕೂಲಿ ಕಾರ್ಮಿಕರು, ಕೂಲಿಗಾಗಿ ಪಂಚಾಯಿತಿಗೆ ಅಲೆದಾಡುವಂತಾಗಿದೆ. ಪಂಚಾಯಿತಿ ಅಧ್ಯಕ್ಷರನ್ನು ಕೂಲಿ ನೀಡಲು ಕೇಳಿದರೆ ನಕಲಿ ಕೂಲಿ ಕಾರ್ಮಿಕರಿದ್ದಾರೆ. ಅದಕ್ಕಾಗಿ ತಡೆ ಹಿಡಿಯಲಾಗಿದೆ. ಅಲ್ಲದೇ ಪ್ರತಿ ಕೂಲಿ ಕಾರ್ಮಿಕರಿಂದ ₹100 ಸಂಗ್ರಹಿಸಿ ಕೊಟ್ಟರೇ ಕೂಲಿ ನೀಡುವುದಾಗಿ ಹೇಳಿ ಬೇಡಿಕೆ ಇಟ್ಟಿದ್ದಾರೆ ಎಂದು ಧರಣಿ ನಿರತರು ಆರೋಪಿಸಿದರು.
ಪಂಚಾಯತಿ ವ್ಯಾಪ್ತಿಯ ವ್ಯಾಕರನಾಳ, ನಾಗಲಾಪುರ, ಹೆಗ್ಗಾಪುರ ಸೇರಿದಂತೆ ವಿವಿಧ ಗ್ರಾಮದ ಕೂಲಿ ಕಾರ್ಮಿಕರು ಕೂಲಿ ಪಾವತಿಸುವಂತೆ ಒತ್ತಾಯಿಸಿ ಗುರುವಾರದಿಂದ ಅನಿರ್ಧಿಷ್ಠಾವಧಿ ಧರಣಿಯನ್ನು ಆರಂಭಿಸಿದ್ದಾರೆ. ಧರಣಿ ನಿರತರು ಕೂಲಿ ಪಾವತಿಯಾಗುವವರೆಗೆ ಧರಣಿಯನ್ನು ಹಿಂಪಡೆಯುವುದಿಲ್ಲ ಎಂದರು.
ಕೂಲಿಕಾರ್ಮಿಕರಾದ ಹನುಮಂತ ಚಲವಾದಿ, ಬೀರಪ್ಪ ಪೂಜಾರಿ, ಛತ್ರಪ್ಪ ನಾಗಲಾಪುರ, ವೀರೇಶ ವ್ಯಾಕರನಾಳ, ಹನುಮಂತ ಹೆಗ್ಗಾಪುರ, ಶಂಕರಗೌಡ, ತಿಮ್ಮನಗೌಡ ವ್ಯಾಕರನಾಳ ಸೇರಿದಂತೆ ನೂರಾರು ಕೂಲಿ ಕಾರ್ಮಿಕರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.