ADVERTISEMENT

’ಆವಿಷ್ಕಾರಗಳಿಂದ ಮಾನವ ಶ್ರೇಯೊಭಿವೃದ್ಧಿ’

ಪ್ರಾಯೋಗಿಕ ವಿಜ್ಞಾನದ ಪ್ರಸ್ತುತತೆ’ ಒಂದು ದಿನದ ಕಾರ್ಯಗಾರ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 14:36 IST
Last Updated 11 ಏಪ್ರಿಲ್ 2019, 14:36 IST
ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ವತಿಯಿಂದ ಬುಧವಾರ ಏರ್ಪಡಿಸಿದ್ದ ಪ್ರಾಯೋಗಿಕ ವಿಜ್ಞಾನದ ಪ್ರಸ್ತುತತೆ ವಿಷಯದ ಒಂದು ದಿನದ ಕಾರ್ಯಗಾರವನ್ನು ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ರಾಜಶೇಖರ ಎಂ. ಉದ್ಘಾಟಿಸಿದರು
ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ವತಿಯಿಂದ ಬುಧವಾರ ಏರ್ಪಡಿಸಿದ್ದ ಪ್ರಾಯೋಗಿಕ ವಿಜ್ಞಾನದ ಪ್ರಸ್ತುತತೆ ವಿಷಯದ ಒಂದು ದಿನದ ಕಾರ್ಯಗಾರವನ್ನು ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ರಾಜಶೇಖರ ಎಂ. ಉದ್ಘಾಟಿಸಿದರು   

ರಾಯಚೂರು: ವೈಜ್ಞಾನಿಕ ಆವಿಷ್ಕಾರಗಳು ಮಾನವನ ಶ್ರೇಯೊಭಿವೃದ್ದಿಗಾಗಿ ಉಪಯೋಗಿಲ್ಪಡಬೇಕು ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ರಾಜಶೇಖರ ಎಂ. ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ವತಿಯಿಂದ ಬುಧವಾರ ಏರ್ಪಡಿಸಿದ್ದ ಪ್ರಾಯೋಗಿಕ ವಿಜ್ಞಾನದ ಪ್ರಸ್ತುತತೆ ವಿಷಯದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು

ಜಗತ್ತು ಹಲವು ವೈಜ್ಞಾನಿಕ ಅವಿಷ್ಕಾರಗಳನ್ನು ನೀಡಿದೆ, ನೀಡುತ್ತಲಿದೆ. ಅದರ ಉದ್ದೇಶ ಕೇವಲ ಮಾನವ ಜನಾಂಗದ ಉದ್ದಾರಕ್ಕಾಗಿ ಮಾತ್ರ ಇತ್ತು. ಆದರೆ ಇಂದು ಮೂಲ ಆಶಯ ಮರೆಮಾಚಿ ಕೆಲವು ವಿಷಮ ವ್ಯಕ್ತಿಗಳು ಆರ್ಥಿಕ ದೃಷ್ಟಿಯಿಂದ ಮಾನವನ ವಿನಾಶಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ಇದೊಂದು ಅಪಾಯಕಾರಿ ಸಂಗತಿಯಾಗಿದೆ. ಇದಕ್ಕೆಲ್ಲ ಮೂಲಕಾರಣ ವಿಜ್ಞಾನದ ಜೊತೆಗೆ ಮೌಲ್ಯಿಕ ಜ್ಞಾನದ ಕೊರತೆ. ಇನ್ನೊಂದು ಮುಖದಲ್ಲಿ ಸಾಮಾನ್ಯ ಜನತೆ ತಮಗೆ ಅರಿವು ಇಲ್ಲದಂತೆ ವೈಭವಿಕ ಜೀವನಕ್ಕೆ ಮಾರುಹೋಗಿದ್ದಾರೆ. ವಿಜ್ಜಾನ ನೀಡಿದ ಅವಿಷ್ಕಾರಿಕ ಅಂಶಗಳನ್ನು ಉಪಯೋಗಿಸಿ ತ್ಯಾಜ್ಯವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡದೆ ಪರಿಸರವನ್ನು ನಾಶಮಾಡುತ್ತಿದ್ದಾರೆ. ಇಂತಹ ಅಂಶಗಳನ್ನು ತೊಲಗಿಸಿ ಸ್ವಚ್ಚ ಜೀವನದ ಜಗತ್ತನ್ನು ಸೃಷ್ಠಿಸುವ ಜವಬ್ದಾರಿ ಇಂದಿನ ವಿದ್ಯಾರ್ಥಿಗಳ ಮೇಲಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪಾಂಡುರಂಗ ಎಂ. ಮಾತನಾಡಿ, ವಿಜ್ಞಾನದ ವಿದ್ಯಾರ್ಥಿಗಳು ಕೇವಲ ಪುಸ್ತಕಕ್ಕೆ, ಪರೀಕ್ಷೆಗಳಿಗೆ ಮಾತ್ರ ಸೀಮಿತವಾಗದೆ ವಾಸ್ತವಿಕ ಜೀವನದ ಪರಿಚಯ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ಶಿಕ್ಷಣದ ನಿಜವಾದ ಆಶಯ ನೆರವೇರಿದಂತಾಗುತ್ತದೆ ಎಂದರು.

ಸಮಾಜಶಾಸ್ತ್ರ ಸಹಪ್ರಾಧ್ಯಾಪಕ ಯಂಕಣ್ಣ ಮಾತನಾಡಿ, ವಿಧ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿ ಸರಿದಾರಿಗೆ ತರುವುದು ಅವಶ್ಯಕ ಎಂದರು. ಕಾರ್ಯಕ್ರಮ ಸಂಚಾಲಕಿ ಡಾ.ಜ್ಯೋತಿ ಸಿ.ಕೆ. ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಭೀಮಶಂಕರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಶರಣೆಗೌಡ ಕೆ., ಗಣಕ ವಿಜ್ಞಾನದ ಮುಖ್ಯಸ್ಥೆ ಡಾ. ಸಯ್ಯದಾ ರಶೀದಾ ಪರ್ವಿನ್, ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಸುಗುಣ ಬಸವರಾಜ, ರಂಗನಾಥ ಬಿಲ್ಲಾರ, ಡಾ. ಮಲ್ಲಯ್ಯ ಅತ್ತನೂರು, ಡಾ. ಸಂತೋಷಕುಮಾರ ರೇವೂರು, ಉಮಾದೇವಿ, ಡಾ. ಸ್ವರೂಪರಾಣ, ಡಾ. ಶಿವಲಿಂಗಮ್ಮ ಮತ್ತು ದೈಹಿಕ ಶಿಕ್ಷಣ ನಿದೇಶಕ ಡಾ. ಪ್ರಸನ್ನ ಕುಮಾರ ಇದ್ದರು.

ವಿದ್ಯಾರ್ಥಿನಿ ಶೃತಿ ಪ್ರಾರ್ಥಿಸಿದರು. ವಿದ್ಯಾರ್ಥಿನಿ ರಮೀಝಾ ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರಿಯಾಂಕ ವಂದಿಸಿದರು. ವಿದ್ಯಾರ್ಥಿನಿ ಸಭಾ ಪಿ. ನಿರೂಪಿಸಿದರು.

**
ವಿದ್ಯಾರ್ಥಿಗಳು ಬಣ್ಣದ ಪ್ರಪಂಚಕ್ಕೆ ಮಾರುಹೋಗಿ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಅವರಿಗೆ ಸರಿಯಾದ ಮಾರ್ಗದರ್ಶನದ ಅಗತ್ಯವಿದೆ.
-ಯಂಕಣ್ಣ, ಸಹಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.