ADVERTISEMENT

ಹಟ್ಟಿ ಚಿನ್ನದ ಗಣಿ: ಚಂರಡಿಗೆ ಸ್ಲ್ಯಾಬ್ ಹಾಕಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 14:03 IST
Last Updated 15 ಜೂನ್ 2025, 14:03 IST
ಹಟ್ಟಿ ಚಿನ್ನದ ಗಣಿ‌ ಕ್ಯಾಂಪ್ ಪ್ರದೇಶದ ಚರಂಡಿಯ ಸ್ಲ್ಯಾಬ್ ಒಡೆದು ಹೋಗಿರುವುದು
ಹಟ್ಟಿ ಚಿನ್ನದ ಗಣಿ‌ ಕ್ಯಾಂಪ್ ಪ್ರದೇಶದ ಚರಂಡಿಯ ಸ್ಲ್ಯಾಬ್ ಒಡೆದು ಹೋಗಿರುವುದು   

ಹಟ್ಟಿ ಚಿನ್ನದ ಗಣಿ: ‘ಪಟ್ಟಣದ ಎಸ್‌ಬಿಐ ಬ್ಯಾಂಕ್ ಹಿಂಭಾಗದ ಚರಂಡಿ ಮೇಲಿನ ಸ್ಪ್ಯಾಬ್ ಕಿತ್ತು ಹೋಗಿದೆ. ಇದರಿಂದ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಕೂಡಲೇ ಇದನ್ನು ದುರಸ್ತಿ ಮಾಡಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಕುರಿತು ಗಣಿ ಕಂಪನಿ ಆಡಳಿತ ಮಂಡಳಿಗೆ ದೂರು ನೀಡಿದರೂ ಕಾರ್ಮಿಕರ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ ಎನ್ನುತ್ತಾರೆ ಕಾಲೊನಿ ನಿವಾಸಿಗಳು.

ಈ ರಸ್ತೆಯಲ್ಲಿ ಲಾರಿ, ಟ್ಯ್ರಾಕ್ಟರ್ ಸಂಚರಿಸುತ್ತವೆ. ರಾತ್ರಿ ಇಲ್ಲಿ ಬೀದಿ ದೀಪಗಳು ಕೂಡ ಬೆಳಗುವುದಿಲ್ಲ. ಪಾದಚಾರಿಗಳು, ಬೈಕ್ ಸವಾರರಿಗೆ ಬೀಳುವ ಆತಂಕ ಎದುರಾಗಿದೆ. ಕೂಡಲೇ ಗಣಿ ಕಂಪನಿ ಆಡಳಿತ ದುರಸ್ತಿಗೆ ಮುಂದಾಗಬೇಕು ಎಂದು ಗುರುಪಾದಪ್ಪ, ರಮೇಶ ಹಾಗೂ ಇತರರು ಆಗ್ರಹಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.