ADVERTISEMENT

ವಿಮಾ ಸಪ್ತಾಹ ಯೋಜನೆ ಮಾಹಿತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 4:17 IST
Last Updated 10 ಜುಲೈ 2021, 4:17 IST
ರಾಯಚೂರಿನ ನಗರಸಭೆ ಸಭಾಂಗಣದಲ್ಲಿ ನಗರ ಮಹಿಳಾ ಸ್ವ - ಸಹಾಯ ಸಂಘದ ಸದಸ್ಯರಿಗೆ ವಿಮಾ ಸಪ್ತಾಹ ಯೋಜನೆಯ ಮಾಹಿತಿ ಕಾರ್ಯಾಗಾರ ಶುಕ್ರವಾರ ನಡೆಯಿತು
ರಾಯಚೂರಿನ ನಗರಸಭೆ ಸಭಾಂಗಣದಲ್ಲಿ ನಗರ ಮಹಿಳಾ ಸ್ವ - ಸಹಾಯ ಸಂಘದ ಸದಸ್ಯರಿಗೆ ವಿಮಾ ಸಪ್ತಾಹ ಯೋಜನೆಯ ಮಾಹಿತಿ ಕಾರ್ಯಾಗಾರ ಶುಕ್ರವಾರ ನಡೆಯಿತು   

ರಾಯಚೂರು: ಪ್ರಧಾನಮಂತ್ರಿ ಜೀವನ ಜ್ಯೋತಿ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯಿಂದ ಸಂಕಷ್ಟದ ಸಮಯದಲ್ಲಿ ಕುಟುಂಬಕ್ಕೆ ಆಸರೆಯಾಗಲಿದ್ದು ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ರಣಜೀತ ಕುಮಾರ ಹೇಳಿದರು.

ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆ, ನಗರಸಭೆ ಹಾಗೂ ಲೀಡ್ ಬ್ಯಾಂಕ್ ಸಹಯೋಗದೊಂದಿಗೆ ಡೇ- ನಲ್ಮ್ ಯೋಜನೆಯಡಿ ರಚನೆಗೊಂಡಿರುವ ನಗರ ಮಹಿಳಾ ಸ್ವ - ಸಹಾಯ ಸಂಘದ ಸದಸ್ಯರಿಗಾಗಿ ಹಮ್ಮಿಕೊಂಡಿದ್ದ ವಿಮಾ ಸಪ್ತಾಹ ಯೋಜನೆಯ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.

‘ಪ್ರತಿ ವರ್ಷ ₹ 330ರಲ್ಲಿ ₹ 2 ಲಕ್ಷ ಜೀವ ವಿಮೆಯನ್ನು ಪಡೆದು ಕೊಳ್ಳಬಹುದಾಗಿದೆ. ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಲ್ಲಿ ವರ್ಷಕ್ಕೆ ₹ 12 ಗಳ ಪ್ರೀಮಿಯಂ ಠೇವಣಿ ಇರಿಸುವ ಮೂಲಕ ಸರ್ಕಾರದಿಂದ ₹ 2 ಲಕ್ಷ ಮರಣ ವಿಮೆ ಖಾತರಿ ಪಡೆಯಬಹುದು‘ ಎಂದು ಯೋಜನೆಗಳ ಕುರಿತು ಮಾಹಿತಿ ನೀಡಿದರು.

ADVERTISEMENT

ನಗರಸಭೆ ಪೌರಾಯುಕ್ತ ವೆಂಕಟೇಶ ಕುಮಾರ ಉದ್ಘಾಟಿಸಿದರು. ವೀಣಾ ರಾಜೇಶ್ವರಿ, ರಂಜಿತ್ ಕುಮಾರ, ದೊಡ್ಡ ಮನಿ, ನಾಗರಾಜ ಎನ್.ಜಿ.ಓ, ದಂಡಪ್ಪ ಬಿರಾದರ್ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.