ADVERTISEMENT

ಸಚಿವ ಸ್ಥಾನದಿಂದ ಈಶ್ವರಪ್ಪ ವಜಾಕ್ಕೆ ಆಗ್ರಹ

ಅಂಗವಿಕಲರ ಸಂಘಟನೆಗಳ ಒಕ್ಕೂಟದಿಂದ ಉಪ ತಹಶೀಲ್ದಾರ್‌ಗೆ ಮನವಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 15:51 IST
Last Updated 23 ಅಕ್ಟೋಬರ್ 2021, 15:51 IST
ಮಾನ್ವಿಯಲ್ಲಿ ಶನಿವಾರ ವಿಕಲಚೇತನರ ಸಂಘಟನೆಗಳ ಒಕ್ಕೂಟದ ಸದಸ್ಯರು ಉಪ ತಹಶೀಲ್ದಾರ್ ವಿರುಪಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಮಾನ್ವಿಯಲ್ಲಿ ಶನಿವಾರ ವಿಕಲಚೇತನರ ಸಂಘಟನೆಗಳ ಒಕ್ಕೂಟದ ಸದಸ್ಯರು ಉಪ ತಹಶೀಲ್ದಾರ್ ವಿರುಪಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಮಾನ್ವಿ: ಅಂಗವಿಕಲರ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಅವರು ನೀಡಿರುವ ಹೇಳಿಕೆಯನ್ನು ಖಂಡಿಸಿ ತಾಲ್ಲೂಕು ವಿಕಲಚೇತನರ ಸಂಘಟನೆಗಳ ಒಕ್ಕೂಟದ ಸದಸ್ಯರು ಶನಿವಾರ ಉಪ ತಹಶೀಲ್ದಾರ್ ವಿರುಪಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಪ್ರಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಪಕ್ಷವನ್ನು ದೂರುವ ಸಂದರ್ಭದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, ‘ಕುಂಟನಿಗೆ ಎದುರಿಗೆ ಇರುವ ಪೈಲ್ವಾನನಿಗೆ ಹೆದರಿಸುವ ಶಕ್ತಿ ಇರಲ್ಲ. ಹಾಗಾಗಿ ಸುಮ್ಮನೆ ಹೆದರಿಸಲು ಬಂದು ಒದೆಯುತ್ತೇನೆ ಎಂದು ಹೇಳುತ್ತಾನೆ‘ ಎಂದು ಹೇಳುವ ಮೂಲಕ ಅಂಗವಿಕಲರ ಬಗ್ಗೆ ಅಪಮಾನಕಾರಿಯಾಗಿ ಮಾತನಾಡಿದ್ದಾರೆ‘ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೂಡಲೆ ಕೆ.ಎಸ್.ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಲಾಯಿತು.

ADVERTISEMENT

ಮಾನ್ವಿ ತಾಲ್ಲೂಕು ವಿಕಲಚೇತನರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳಾದ ಶಿವಕುಮಾರ ಚಲ್ಮಲ್, ವಿ.ಎಸ್.ರಾಘವೇಂದ್ರ, ಡಿ.ಹನುಮಂತ ಕಪಗಲ್, ನಿಂಗನಗೌಡ, ಹನುಮೇಶ ಕಾತರಿಕಿ, ನರಸಪಪ್ ಚೀಕಲಪರ್ವಿ, ಮಹೇಶ ಉಮಳಿಹೊಸೂರು, ಯಲ್ಲಪ್ಪ ಬಾಗಲವಾಡ, ನಿಂಗಣ್ಣ ಮುಸ್ಟೂರು, ತಿಮ್ಮಯ್ಯ ನಾಯಕ, ಆಂಜನೇಯ ಹರವಿ, ಅಯ್ಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.