ADVERTISEMENT

‘ಅಲಾಯಿ ಕುಣಿಯುವಾಗ ಬಡಿಗೆ, ಬೆತ್ತ ಬೇಡ’

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 16:05 IST
Last Updated 29 ಜೂನ್ 2025, 16:05 IST
ಜಾಲಹಳ್ಳಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ಮೊಹರಂ ಹಬ್ಬದ ಅಂಗವಾಗಿ ಪಿಎಸ್ಐ ವೈಶಾಲಿ ಝಳಕಿ ನೇತೃತ್ವದಲ್ಲಿ ಶಾಂತಿ ಪಾಲನಾ ಸಭೆ ನಡೆಯಿತು
ಜಾಲಹಳ್ಳಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ಮೊಹರಂ ಹಬ್ಬದ ಅಂಗವಾಗಿ ಪಿಎಸ್ಐ ವೈಶಾಲಿ ಝಳಕಿ ನೇತೃತ್ವದಲ್ಲಿ ಶಾಂತಿ ಪಾಲನಾ ಸಭೆ ನಡೆಯಿತು   

ಜಾಲಹಳ್ಳಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ಪಿಎಸ್ಐ ವೈಶಾಲಿ ಝಳಕಿ ನೇತೃತ್ವದಲ್ಲಿ ಮೊಹರಂ ಶಾಂತಿ ಪಾಲನಾ ಸಭೆ ನಡೆಯಿತು.

ಸಭೆಯಲ್ಲಿ ಅವರು ಮಾತನಾಡಿ, ‘ಮೊಹರಂ ಹಬ್ಬವನ್ನು ಗ್ರಾಮೀಣ ಪ್ರದೇಶದಲ್ಲಿ ಶಾಂತಿ, ಶ್ರದ್ಧೆಯಿಂದ ಅಚರಣೆ ಮಾಡಲಾಗುತ್ತದೆ. ಗ್ರಾಮದ ಹಿರಿಯರು ತಮ್ಮ ಮಕ್ಕಳ ಮೇಲೆ ಗಮನ ಇಡಬೇಕು. ಸಣ್ಣಪುಟ್ಟದ ಜಗಳ ಅದರೇ ತಕ್ಷಣವೇ ಬುದ್ದಿವಾದ ಹೇಳಬೇಕು’ ಎಂದು ಹೇಳಿದರು.‌

‘ಕಾನೂನು ಉಲ್ಲಂಘನೆ ಅಗುವಂತಹ ಯಾವುದೇ ಘಟನೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಲಾಯಿ ಕುಣಿಯುವಾಗ ಯಾವುದೇ ಬಡಿಗೆ, ಬೆತ್ತ ಬಳಸಬಾರದು. ಯಾರಾದರೂ ಅಹಿತಕರ ಘಟನೆಗೆ ಕಾರಣವಾದರೆ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ತಿಳಿಸಿದರು.

ADVERTISEMENT

ರಾಜಾ ವಾಸುದೇವ ನಾಯಕ ವಕೀಲ,ತಾ. ಪಂ. ಮಾಜಿ ಸದಸ್ಯ ಗೋವಿಂದ ರಾಜ ತಿಂಪೂರು ಮಾತನಾಡಿದರು.

ಮುಖಂಡರಾದ ಕೋಪ್ರೇಶ್ ದೇಸಾಯಿ, ಯಾಸೀನ್ ಸಾಬ್ ಮುಲ್ಲಾ, ತಿಮ್ಮಣ್ಣ ನಾಯಕ, ಮಕ್ತೂಮ್ ಬಾಷಾ ಪಾರಶಿ, ಶಿವನಗೌಡ ನಾಯಕ,ಬಾಳಪ್ಪ ಬಾವಿಮನಿ, ಶಬ್ಬಿರ, ರಂಗನಾಥ ಮುರಾಳ,ಬಸವರಾಜ ಗೋಪಾಳಪುರ, ಹೈದರ ಸಾಬ್ ಮುಲ್ಲಾ, ಸಾಬಣ್ಣ ಕಮ್ಮಲದಿನ್ನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.