ADVERTISEMENT

ರಾಯಚೂರು: ಹೃದಯಾಘಾತದಿಂದಾಗಿ ಪತ್ರಕರ್ತ ಅಶ್ರಫ್‌ ಹುಸೇನಿ ನಿಧನ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 13:17 IST
Last Updated 17 ಜನವರಿ 2026, 13:17 IST
   

ರಾಯಚೂರು: ಸೈಯದ್ ಶಮ್ಸ್ ಆಲಂ ಹುಸೇನಿ ಅಲಿಯಾಸ್ ಸೈಯದ್ ನಸೀಮ್ ಅಶ್ರಫ್‌ ಹುಸೇನಿ (49 ವರ್ಷ) ಶನಿವಾರ ಬೆಳಿಗ್ಗೆ ಹೃದಯಾಘಾತದಿಂದಾಗಿ ನಿಧನರಾದರು.

ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಮೃತರ ಅಂತ್ಯಕ್ರಿಯೆ ಸೈಯದ್ ಶಮ್ಸ್ ಆಲಂ ಹುಸೇನಿ ರಹೇಮತುಲ್ಲಾ ಅಲ್ಲೆಹೆ ದರ್ಗಾ ಆವರಣದ ಕಬರಸ್ತಾನದಲ್ಲಿ ನಡೆಯಿತು.

ಅಶ್ರಫ್‌ ಹುಸೇನಿ ಅವರು ಸಿಸಾಯತ್ ಉರ್ದು ದಿನಪತ್ರಿಕೆ, ಈಟಿವಿ ಉರ್ದು, ನ್ಯೂಸ್ 18 ಉರ್ದು, ದೂರದರ್ಶನದ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.