ADVERTISEMENT

ರಾಯಚೂರು: ಕನ್ನಡ ಕಾರ್ಯಕರ್ತರ ಶಿಬಿರ 1ರಂದು

​ಪ್ರಜಾವಾಣಿ ವಾರ್ತೆ
Published 22 ಮೇ 2025, 12:59 IST
Last Updated 22 ಮೇ 2025, 12:59 IST
ಅಶೋಕಕುಮಾರ ಜೈನ
ಅಶೋಕಕುಮಾರ ಜೈನ    

ರಾಯಚೂರು: ‘ಕನ್ನಡ ಮಿತ್ರ ಕೂಟ ಸಂಘದಿಂದ ಜೂನ್ 1ರಂದು ಬೆಳಿಗ್ಗೆ 10ಗಂಟೆಗೆ ನಗರದ ಕನ್ನಡ ಭವನದಲ್ಲಿ ಕನ್ನಡ ಕಾರ್ಯಕರ್ತರ ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕಕುಮಾರ ಜೈನ ತಿಳಿಸಿದರು.

‘ಕನ್ನಡ ಕಟ್ಟುವ ಆಸಕ್ತಿವುಳ್ಳ ವಿದ್ಯಾರ್ಥಿಗಳು ಹಾಗೂ ಕನ್ನಡ ಅಭಿಮಾನಿಗಳು ಕಾರ್ಯಕರ್ತರ ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಕನ್ನಡ ಭಾಷೆ ಅಳಿವು ಉಳಿವಿಗಾಗಿ ಶಿಬಿರ ನಡೆಯಲಿದೆ’  ಎಂದು ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

‘ನೋಂದಣಿಗೆ ಮೇ 29ರಂದು ಕೊನೆಯ ದಿನ. ಹೆಚ್ಚಿನ ಮಾಹಿತಿಗೆ ರಾಮಣ್ಣ ಮ್ಯಾದರ-8453770157, ರಾಮಲಿಂಗಪ್ಪ ಕುಣಸಿ-9448910398 ಸಂಪರ್ಕಿಸಬಹುದು' ಎಂದು ತಿಳಿಸಿದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ರಾಮಣ್ಣ ಮ್ಯಾದರ, ನಿಜಾಮುದ್ದೀನ್, ಬಶೀರ ಅಹ್ಮದ್ ಹೊಸಮನಿ, ರಫೀಕ್‌ ಅಹ್ಮದ್, ರಾಮಲಿಂಗಪ್ಪ ಕುಣಸಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.