ಸಿಂಧನೂರು: ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಸರ್ವ ಸದಸ್ಯರು ಸೋಮವಾರ ನಗರದ ಸಕ್ರ್ಯೂಟ್ ಹೌಸ್‍ನಲ್ಲಿ ಸಭೆ ನಡೆಸಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದರು.
ಇಸ್ಮಾಯಿಲ್ ಸುರ್ಕಿ (ಜಿಲ್ಲಾ ಕಾರ್ಯಾಧ್ಯಕ್ಷ), ಶೇಖ್ ದಾದಾಹುಸೇನ್ (ಜಿಲ್ಲಾ ಸಂಘಟನಾ ಕಾರ್ಯದರ್ಶಿ), ಶೇಖ್ ಶಾವಲಿ (ಜಿಲ್ಲಾ ಉಪಾಧ್ಯಕ್ಷ), ನೂರ್‍ಬಾಬಾ (ತಾಲ್ಲೂಕು ಅಧ್ಯಕ್ಷ), ಡಾ.ಅಲ್ಲಬಂದುಸಾಬ (ತಾಲ್ಲೂಕು ಗೌರವಾಧ್ಯಕ್ಷ)ರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ವೈ.ಬಿ.ಕಟ್ಟಿಮನಿ ಆದೇಶ ಪತ್ರ ನೀಡಿ ‘ಕನ್ನಡ ನೆಲ, ಜಲ, ಭಾಷೆ, ಗಡಿ ಹಾಗೂ ಖನಿಜ ಸಂಪತ್ತುಗಳನ್ನು ಉಳಿಸಲು ಹೋರಾಟ ಮಾಡಬೇಕು. ಸಮಾಜದಲ್ಲಿ ನಡೆಯುವ ಅನ್ಯಾಯ, ಅಕ್ರಮ, ಅವ್ಯವಹಾರಗಳು ಹಾಗೂ ಸಮಾಜಘಾತುಕ ಕೆಲಸಗಳ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಸಂಚಾಲಕ ರಂಜಾಕ್ ಸೇರಿದಂತೆ ಪದಾಧಿಕಾರಿಗಳು, ಯುವಕರು ಭಾಗವಹಿಸಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.