ADVERTISEMENT

ಕವಿತಾಳ | ವಿದ್ಯುತ್‌ ಕಿಡಿ ಬಿದ್ದು ಹತ್ತಿಗೆ ಬೆಂಕಿ: ನಷ್ಟ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 6:14 IST
Last Updated 14 ಅಕ್ಟೋಬರ್ 2025, 6:14 IST
ಕವಿತಾಳ ಸಮೀಪದ ಬಾಗಲವಾಡ ಗ್ರಾಮದಲ್ಲಿ ಒಣಗಲು ಹಾಕಿದ್ದ ಹತ್ತಿಗೆ ವಿದ್ಯುತ್‌ ಕಿಡಿ ಬಿದ್ದು ಸುಟ್ಟಿರುವುದು.
ಕವಿತಾಳ ಸಮೀಪದ ಬಾಗಲವಾಡ ಗ್ರಾಮದಲ್ಲಿ ಒಣಗಲು ಹಾಕಿದ್ದ ಹತ್ತಿಗೆ ವಿದ್ಯುತ್‌ ಕಿಡಿ ಬಿದ್ದು ಸುಟ್ಟಿರುವುದು.   

ಕವಿತಾಳ: ಸಮೀಪದ ಬಾಗಲವಾಡ ಗ್ರಾಮದಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದಾಗಿ ಕಿಡಿ ಬಿದ್ದು ಒಣಗಲು ಹಾಕಿದ್ದ ಹತ್ತಿ ಸಂಪೂರ್ಣ ಸುಟ್ಟಿದೆ.

ಗ್ರಾಮದ ರೈತ ಮಾನಯ್ಯ ದೋತರಬಂಡಿ ಅವರು ಹೊಲದಲ್ಲಿನ ಹತ್ತಿ ಬಿಡಿಸಿ, ಪಕ್ಕದ ಖಾಲಿ ಜಾಗದಲ್ಲಿ ಬಿಸಿಲಿಗೆ ಒಣಗಲು ಹಾಕಿದ್ದರು. ಮೇಲೆಯೇ ಹಾಯ್ದು ಹೊದ ವಿದ್ಯುತ್‌ ತಂತಿಗಳು ಗಾಳಿಗೆ ಪರಸ್ಪರ ತಗುಲಿ ಬೆಂಕಿ ಕಿಡಿ ಬಿದ್ದು ಹತ್ತಿ ಸುಟ್ಟಿದೆ.

6 ಎಕರೆ ಪ್ರದೇಶದಲ್ಲಿ ಹತ್ತಿ ಬೆಳೆ ಬೆಳೆಯಲು ಕ್ರಿಮಿನಾಶಕ, ರಸಗೊಬ್ಬರ, ಕೂಲಿ ಕಾರ್ಮಿಕರು ಸೇರಿದಂತೆ ಮತ್ತಿತರ ಅಂದಾಜು ₹ 2.5 ಲಕ್ಷ ಖರ್ಚಾಗಿದೆ. 60 ಕ್ವಿಂಟಲ್‌ ಹತ್ತಿ ಸಂಪೂರ್ಣ ಸುಡ್ಡಿದ್ದು, ₹ 5 ಲಕ್ಷ ನಷ್ಟ ಉಂಟಾಗಿದೆ ಎಂದು ರೈತ ಮಾನ್ಯಯ ಹೇಳಿದರು.

ADVERTISEMENT

ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ, ಹೆಚ್ಚಿನ ಅನಾಹುತ ತಪ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.