
ಪ್ರಜಾವಾಣಿ ವಾರ್ತೆ(ಸಾಂದರ್ಭಿಕ ಚಿತ್ರ)
ಕವಿತಾಳ: ಸಿರವಾರ ತಾಲ್ಲೂಕಿನ ಚಿಕ್ಕಹಣಿಗಿ ಗ್ರಾಮದಲ್ಲಿ ಬುಧವಾರ ಮಾವ, ಸೊಸೆಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.
ಗ್ರಾಮದ ರೇಖಾ ನಾಗರಾಜ (25) ಮೃತ ಮಹಿಳೆ. ಮನೆಯಲ್ಲಿದ್ದ ಸೊಸೆಯ ಕತ್ತು ಕೊಯ್ದು ಮಾವ ಸಿದ್ದಪ್ಪ ಪರಾರಿಯಾಗಿದ್ದಾನೆ. ರೇಖಾ ಗರ್ಭಿಣಿ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಕವಿತಾಳ ಠಾಣೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.