ಕವಿತಾಳ: ಏಳು ತಾಸು ಅವಧಿಯಲ್ಲಿ ನಿರಂತರ 18 ಎಕರೆ ಚಿಕ್ಕ ಕುಂಟೆ ಹೊಡೆದ ತೊಪ್ಪಲದೊಡ್ಡಿ ಗ್ರಾಮದ ರೈತ ವಡಿಕೆಪ್ಪ ಅವರ ಕಿಲಾರಿ ಎತ್ತುಗಳ ಬಗ್ಗೆ ರೈತರು ಪ್ರಶಂಸೆ ವ್ಯಕ್ತಪಡಿಸಿದರು.
ಪಟ್ಟಣದ ಪ್ರದೀಪಕುಮಾರ ಇಲ್ಲೂರು ಅವರ 20 ಎಕರೆ ಜಮೀನಿನಲ್ಲಿ ಹತ್ತಿ ಬೆಳೆ ನಡುವೆ ರೈತ ವಡಿಕೆಪ್ಪ ಬುಧವಾರ ಬೆಳಿಗ್ಗೆ ಚಿಕ್ಕ ಕುಂಟೆ ಹೊಡೆದಿದ್ದು, ಏಳು ತಾಸು ಅವಧಿಯಲ್ಲಿ 18 ಎಕರೆ ಪೂರ್ಣಗೊಳಿಸಿವೆ. ‘ಯಂತ್ರಕ್ಕಿಂತ ಕಡಿಮೆ ಖರ್ಚಿನಲ್ಲಿ ಮತ್ತು ಕಡಿಮೆ ಅವಧಿಯಲ್ಲಿ ಎತ್ತುಗಳು ಅಚ್ಚುಕಟ್ಟಾಗಿ ಚಿಕ್ಕ ಕುಂಟಿ ಹೊಡೆದ ವಿಷಯ ತಿಳಿದ ರೈತರು ಜಮೀನಿಗೆ ಆಗಮಿಸಿ ವೀಕ್ಷಿಸಿದರು’ ಎಂದು ರೈತ ವಡಿಕೆಪ್ಪ ತಿಳಿಸಿದರು.
ರೈತರಾದ ವೀರಭದ್ರಗೌಡ, ಬನದಪ್ಪಗೌಡ ವಂದ್ಲಿ, ಮುಖಂಡರಾದ ರುಕ್ಮುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.