ADVERTISEMENT

ಕವಿತಾಳ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 14:19 IST
Last Updated 2 ಜೂನ್ 2025, 14:19 IST
ಕವಿತಾಳ ಸಮೀಪದ ವಟಗಲ್‌ ಗ್ರಾಮದಲ್ಲಿ ಭಾನುವಾರ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು
ಕವಿತಾಳ ಸಮೀಪದ ವಟಗಲ್‌ ಗ್ರಾಮದಲ್ಲಿ ಭಾನುವಾರ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು   

ಕವಿತಾಳ: ‘ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಪ್ರತಿಯೊಬ್ಬರ ಜವಾಬ್ದಾರಿ’ ಎಂದು ಸಾಹಿತಿ, ನಿವೃತ್ತ ಶಿಕ್ಷಕ ವೆಂಕನಗೌಡ ಪಾಟೀಲ ಹೇಳಿದರು.

ಸಮೀಪದ ವಟಗಲ್‌ ಗ್ರಾಮದಲ್ಲಿ ಅಮರಮ್ಮ ರಾಮನಗೌಡ ಮಾಲಿ ಪಾಟೀಲ ಸ್ಮರಣಾರ್ಥ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ,‘ಪ್ರತಿ ವರ್ಷದ ಸಂಪ್ರದಾಯದಂತೆ 7, 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುತ್ತಿದೆ’ ಎಂದರು.

7ನೇ ತರಗತಿಯ ರೇಣುಕಾ ಶೇಖರಪ್ಪ, ಹತ್ತನೇ ತರಗತಿಯ ಆಕಾಂಕ್ಷಾ ಹಿರೇಮಠ, ಕುಮಾರ ರಾಚೋಟಿ, ದ್ವಿತೀಯ ಪಿಯುಸಿಯ ಅನುಷಾ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.

ADVERTISEMENT

ಮುಖಂಡರಾದ ಶಿವಕುಮಾರ ಪಾಟೀಲ, ಆದನಗೌಡ ಪಾಟೀಲ, ಅಮರೇಶ, ಶಿವನಗೌಡ ಪಾಟೀಲ, ಮುಖ್ಯಶಿಕ್ಷಕಿ ಪುಷ್ಪಾ ಪತ್ತಾರ, ಶಿಕ್ಷಕ ಹನುಮೇಶ ಮಡಿವಾಳ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.