ADVERTISEMENT

ಕವಿತಾಳ: ಗ್ರಾ.ಪಂ ಉಪ ಚುನಾವಣೆ: ಶೇ 63ರಷ್ಟು ಮತದಾನ

​ಪ್ರಜಾವಾಣಿ ವಾರ್ತೆ
Published 25 ಮೇ 2025, 14:22 IST
Last Updated 25 ಮೇ 2025, 14:22 IST
ಕವಿತಾಳ ಸಮೀಪದ ಕೊಟೇಕಲ್‌ ಗ್ರಾಮದಲ್ಲಿ ಭಾನುವಾರ ನಡೆದ ಉಪ ಚುನಾವಣೆಯಲ್ಲಿ ಮತದಾರರು ಮತ ಚಲಾಯಿಸಿದರು
ಕವಿತಾಳ ಸಮೀಪದ ಕೊಟೇಕಲ್‌ ಗ್ರಾಮದಲ್ಲಿ ಭಾನುವಾರ ನಡೆದ ಉಪ ಚುನಾವಣೆಯಲ್ಲಿ ಮತದಾರರು ಮತ ಚಲಾಯಿಸಿದರು   

ಕವಿತಾಳ: ಸಮೀಪದ ಅಮೀನಗಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟೇಕಲ್‌ ಗ್ರಾಮದಲ್ಲಿ ತೆರವಾಗಿದ್ದ ಗ್ರಾಮ ಪಂಚಾಯಿತಿಯ ಒಂದು ಸದಸ್ಯ ಸ್ಥಾನಕ್ಕೆ ಭಾನುವಾರ ನಡೆದ ಉಪ ಚುನಾವಣೆಯಲ್ಲಿ ಶೇ 63.26ರಷ್ಟು ಮತದಾನವಾಗಿದೆ.

ಪರಿಶಿಷ್ಟ ಪಂಗಡದ ಮಹಿಳೆ ಮೀಸಲಾತಿ ಹೊಂದಿದ್ದ ಈ ಸ್ಥಾನದಲ್ಲಿ ಆಯ್ಕೆಯಾಗಿದ್ದ ಸದಸ್ಯೆ ಮೃತಪಟ್ಟ ಹಿನ್ನೆಲೆಯಲ್ಲಿ ಉಪ ಚುನಾವಣೆ ನಡೆಯಿತು.

ಒಟ್ಟು 942 ಮತದಾರರಲ್ಲಿ 293 ಪುರುಷ ಮತದಾರರು ಮತ್ತು 303 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಮತದಾನ ಪ್ರಕ್ರಿಯೆ ಶಾಂತಿಯಿಂದ ಮುಗಿದಿದೆ ಎಂದು ಚುನಾವಣಾಧಿಕಾರಿಗಳಾದ ಶ್ರೀನಿವಾಸ ಯಾಳಗಿ ಮತ್ತು ದೇವರಾಜ ತಿಳಿಸಿದರು.

ADVERTISEMENT

ಮಸ್ಕಿ ತಹಶೀಲ್ದಾರ್ ಮಲ್ಲಪ್ಪ ಯರಗೋಳ ಮತದಾನ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.