ADVERTISEMENT

ಅವ್ವ ಫೌಂಡೇಶನ್ ಕಾರ್ಯಕ್ಕೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 30 ಮೇ 2021, 10:58 IST
Last Updated 30 ಮೇ 2021, 10:58 IST
ಶಕ್ತಿನಗರದ ಹೆಲಿಪ್ಯಾಡ್‌ ಆವರಣದಲ್ಲಿ ಶನಿವಾರ ಅವ್ವ ಫೌಂಡೇಶನ್ ವತಿಯಿಂದ ಡಿವೈಎಸ್‌ಪಿ ಶಿವನಗೌಡ ಪಾಟೀಲ ಅವರು ಬಡ ಕುಟುಂಬಗಳಿಗೆ ಆಹಾರಧಾನ್ಯದ ಕಿಟ್ ವಿತರಿಸಿದರು
ಶಕ್ತಿನಗರದ ಹೆಲಿಪ್ಯಾಡ್‌ ಆವರಣದಲ್ಲಿ ಶನಿವಾರ ಅವ್ವ ಫೌಂಡೇಶನ್ ವತಿಯಿಂದ ಡಿವೈಎಸ್‌ಪಿ ಶಿವನಗೌಡ ಪಾಟೀಲ ಅವರು ಬಡ ಕುಟುಂಬಗಳಿಗೆ ಆಹಾರಧಾನ್ಯದ ಕಿಟ್ ವಿತರಿಸಿದರು   

ಶಕ್ತಿನಗರ: ‘ಅವ್ವ ಫೌಂಡೇಶನ್ ಸಾಮಾಜಿಕ ಕಾರ್ಯಗಳನ್ನು ಮಾಡುವುದರ ಜತೆಗೆ ಲಾಕ್‌ಡೌನ್‌ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ಆಹಾರಧಾನ್ಯದ ಕಿಟ್‌ ವಿತರಣೆಗೆ ಮುಂದಾಗಿರುವುದು ಶ್ಲಾಘನೀಯ’ ಎಂದು ಡಿವೈಎಸ್‌ಪಿ ಶಿವನಗೌಡ ಪಾಟೀಲ ಅವರು ಹೇಳಿದರು.

ಅವ್ವ ಫೌಂಡೇಶನ್ ಸಂಸ್ಥೆ ವತಿಯಿಂದ ಶಕ್ತಿನಗರದ ಹೆಲಿಪ್ಯಾಡ್‌ ಆವರಣದಲ್ಲಿ ಶನಿವಾರ ಬಡ ಕುಟುಂಬಗಳಿಗೆ ಆಹಾರಧಾನ್ಯದ ಕಿಟ್‌ ವಿತರಿಸಿ ಮಾತನಾಡಿದರು.

ಲಾಕ್‌ಡೌನ್ ಸಮಯದಲ್ಲಿ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂಥ ಬಡ ಕುಟುಂಬಗಳನ್ನು ಗುರುತಿಸಿ, ಹಸಿದವರಿಗೆ ಆಹಾರ ಧಾನ್ಯದ ಕಿಟ್‌ ವಿತರಣೆ ಮಾಡುವುದು ಪುಣ್ಯದ ಕೆಲಸ. ಇದರಿಂದ ದೇವರು ಕೂಡ ಸಂತೃಪ್ತನಾಗುತ್ತಾನೆ ಎಂದರು.

ADVERTISEMENT

ಗೃಹ ರಕ್ಷಕ ಸಿಬ್ಬಂದಿ, ಯಾದವ ನಗರ ಕಾಲೊನಿ, ಎಸ್‌ಬಿಟಿ ಏರಿಯಾ ಲೇಬರ್‌ ಕಾಲೊನಿ, 2ನೇ ಕ್ರಾಸ್‌ ವಡವಟ್ಟಿ ಏರಿಯದ ಲೇಬರ್‌ ಕಾಲೊನಿಯ 150 ಬಡ ಕುಟುಂಬಗಳಿಗೆ ಕಿಟ್ ವಿತರಿಸಲಾಯಿತು.

ಶಕ್ತಿನಗರ ಠಾಣೆಯ ಪಿಎಸ್‌ಐ ಎಚ್‌.ಹುಲಿಗೇಶ, ಆರ್‌ಟಿಪಿಎಸ್‌ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘದ ಅಧ್ಯಕ್ಷ ಟಿ.ಸೂಗಪ್ಪ, ದೇವಸೂಗೂರು ಅವ್ವ ಫೌಂಡೇಶನ್ ಅಧ್ಯಕ್ಷ ಟಿ.ನರಸಪ್ಪ, ಉಪಾಧ್ಯಕ್ಷ ಎಂ.ಜಿ.ಸಾಜೀದ್‌, ಕಾರ್ಯದರ್ಶಿ ಲಿಂಗರಾಜ, ಯಾಪಲದಿನ್ನಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಸ್‌.ಜಿ.ಕಣ್ಣೂರ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.