ಕವಿತಾಳ: ಪಟ್ಟಣದಲ್ಲಿರುವ ಲಾಡ್ಲೇ ಮಶಾಕ್ ದರ್ಗಾ ಉರುಸ್ ಗುರುವಾರ ಸಂಭ್ರಮದಿಂದ ಜರುಗಿತು. ಸುರಿದ ಮಳೆಯನ್ನೂ ಲೆಕ್ಕಿಸದೆ ಭಕ್ತರು ಕಾಯಿ, ಕರ್ಪೂರ, ಸಕ್ಕರೆ ಸಮರ್ಪಿಸಿ ಭಕ್ತಿ ಮೆರೆದರು.
ಹಿಂದೂ, ಮುಸ್ಲಿಂ ಸಮಾಜದ ಭಕ್ತರು ದರ್ಗಾದಲ್ಲಿ ಸಕ್ಕರೆ ಅರ್ಪಿಸಿ, ದೀಢ್ ನಮಸ್ಕಾರ ಹಾಕುವ ಮೂಲಕ ಭಕ್ತರು ಹರಕೆ ತೀರಿಸಿದರು. ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಸೈಯದ್ ಅಬ್ದುಲ್ ಸತ್ತಾರ್‌ಸಾಬ್ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.
ದರ್ಗಾ ಕೆಳ ಭಾಗದಲ್ಲಿ ಹಾಕಲಾಗಿದ್ದ ಅಂಗಡಿಗಳಲ್ಲಿ ಜಿಲೇಬಿ, ಭಜಿ ಸೇರಿದಂತೆ ಭಕ್ತರು ತರಹೇವಾರಿ ತಿನಿಸುಗಳನ್ನು ಖರೀದಿಸಿದ ದೃಶ್ಯ ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.