ADVERTISEMENT

ಲಿಂಗಸುಗೂರು | ಗದ್ದೆಮ್ಮ ದೇವಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 8:05 IST
Last Updated 25 ಫೆಬ್ರುವರಿ 2026, 8:05 IST
ಲಿಂಗಸುಗೂರು ತಾಲ್ಲೂಕಿನ ಈಚನಾಳ ಗ್ರಾಮದಲ್ಲಿ ಗದ್ದೆಮ್ಮದೇವಿ ರಥೋತ್ಸವ ವಿಜೃಂಬಣೆಯಿಂದ ಜರುಗಿತು
ಲಿಂಗಸುಗೂರು ತಾಲ್ಲೂಕಿನ ಈಚನಾಳ ಗ್ರಾಮದಲ್ಲಿ ಗದ್ದೆಮ್ಮದೇವಿ ರಥೋತ್ಸವ ವಿಜೃಂಬಣೆಯಿಂದ ಜರುಗಿತು   

ಲಿಂಗಸುಗೂರು: ತಾಲ್ಲೂಕಿನ ಈಚನಾಳ ಗ್ರಾಮದಲ್ಲಿ ಗದ್ದೆಮ್ಮದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ಸೋಮವಾರ ಸಂಜೆ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಕೆಸರಹಟ್ಟಿ ಗ್ರಾಮದಿಂದ ರಥ ಎಳೆಯುವ ಹಗ್ಗ ಮತ್ತು ಕಳಸ, ಯರಗುಂಟಿ, ಮರಗಂಟನಾಳ, ತೊರಲಬೆಂಚಿ, ಗ್ರಾಮಗಳಿಂದ ಭಕ್ತರು ಕಳಸಗಳೊಂದಿಗೆ ದೇವಿ ದೇವಸ್ಥಾನಕ್ಕೆ ಆಗಮಿಸಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ, ಹೂವುಗಳಿಂದ ಸಿಂಗಾರ ಮಾಡಿದ್ದ ರಥಕ್ಕೆ ಕಳಸರೋಹಣ ನೆರವೇರಿಸಿದರು. ತೇರಿನಲ್ಲಿ ದೇವಿಯ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಭಕ್ತರು ಉತ್ತತ್ತಿ, ಫಲಪುಷ್ಟಗಳನ್ನು ರಥಕ್ಕೆ ಎಸೆದು ಭಕ್ತಿ ಅರ್ಪಿಸಿದರು.

ADVERTISEMENT

ಪಿಐ ಹೊಸಕೇರಪ್ಪ, ಪಿಎಸ್ಐ ಜಿ.ಎಸ್.ಬುರ್ಲಿ ನೇತ್ರತ್ವದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.