ಲಿಂಗಸುಗೂರು: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಒತ್ತಡದ ಬದುಕಿನಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಹೀಗಾಗಿ ವಕೀಲರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಮಂಜುಳಾ ಉಂಡಿ ಹೇಳಿದರು.
ಪಟ್ಟಣದ ವಕೀಲರ ಭವನದಲ್ಲಿ ಬೆಂಗಳೂರಿನ ವೈದೇಹಿ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ನ್ಯಾಯವಾದಿಗಳ ಸಂಘದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಹೃದಯ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್ ತೊಂದರೆಗಳು, ನರರೋಗದ ಸಮಸ್ಯೆ, ಕಣ್ಣಿನ ತೊಂದರೆ, ಎಲುಬು-ಕೀಲುಗಳ ತೊಂದರೆ, ವಿವಿಧ ರೋಗಗಳಿಗೆ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದರು.
ವೈದೇಹಿ ಆಸ್ಪತ್ರೆಯ ಕೆ.ಮಲ್ಲಿಕಾರ್ಜುನ ಹಚ್ಚೊಳ್ಳಿ, ಸಾರ್ವಜನಿಕ ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ, ಡಾ. ಅಲ್ಲಮಪ್ರಭು, ಡಾ. ಸತ್ಯನಾರಾಯಣ, ಡಾ.ಸಂದೇಶ, ವಕೀಲರ ಸಂಘದ ಅಧ್ಯಕ್ಷ ಭೂಪನಗೌಡ ಪಾಟೀಲ, ಅಂಬಿಕಾ ವಟಗಲ್, ಬಾಲರಾಜ ಸಾಗರ ಮಾನಮಟ್ಟಿ, ನಾಗರಾಜ ಗಸ್ತಿ, ರಾಘವೇಂದ್ರ ಮುತಾಲಿಕ, ನಾಗರಾಜ ಯಲಿಗಾರ, ಜರ್ತಾನ್ ಆಫ್ರೀನ್, ಪ್ರೇರಣಾ ರಾಮನಗೌಡ, ವೆಂಕೋಬ ಗುಡದನಾಳ, ರಾಜಶೇಖರ, ದೇವರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.