ಶಕ್ತಿನಗರ: ಶಕ್ತಿನಗರದ ಗಡಿಯಲ್ಲಿ ಮದ್ಯದಂಗಡಿಗಳು ಆರಂಭವಾಗದ್ದರಿಂದ ಮದ್ಯಪ್ರಿಯರಿಗೆ ನಿರಾಸೆಯಾಯಿತು.
ಗಡಿಭಾಗದ 5 ರಿಂದ 10 ಕಿ.ಮೀ. ಅಂತರ್‌ದಲ್ಲಿ ಇರುವ ರಾಯಚೂರು ತಾಲ್ಲೂಕಿನ ದೇವಸೂಗೂರು ಜನತಾ ಕಾಲೊನಿಯ ಸಿಎಲ್–2, ಯಾಪಲದಿನ್ನಿ –ಸಿಎಲ್ 9, ಆತ್ಕೂರು ಮತ್ತು ಚಂದ್ರಬಂಡಾ ಗ್ರಾಮದ ಎಂಎಸ್‌ಐಎಲ್ ಹಾಗೂ ವೈನ್‌ಶಾಪ್ ಅಂಗಡಿಗಳು ಆರಂಭವಾಗಿಲ್ಲ.
ಇದರಿಂದ ನಿರಾಸೆಗೊಂಡ ಮದ್ಯಪ್ರಿಯರು 20 ಕಿ.ಮೀ. ದೂರದಲ್ಲಿ ಇರುವ ರಾಯಚೂರು ನಗರಕ್ಕೆ ತೆರಳಿ ಅಲ್ಲಿ ಆರಂಭವಾಗಿರುವ ಮದ್ಯದಂಗಡಿಗಳಿಂದ, ಮದ್ಯಗಳನ್ನು ತಂದರು.
ತೆಲಂಗಾಣ ಮತ್ತು ಆಂಧ್ರಪ್ರದೇಶದ ನೆರೆಯ ಜಿಲ್ಲೆಗಳಿಂದ ಮದ್ಯ ಖರೀದಿಸಲು ಜನರು ಬರುತ್ತಾರೆ. ಕೊರೊನಾ ಹರಡದಂತೆ ತಡೆಯಲು ದೇವಸೂಗೂರು ಸೇರಿದಂತೆ ಒಟ್ಟು 5 ಮದ್ಯದ ಅಂಗಡಿಗಳು ಬಂದ್ ಮಾಡಲಾಗಿದೆ ಎಂದು ಅಬಕಾರಿ ಇಲಾಖೆಯ ಜಿಲ್ಲಾಧಿಕಾರಿ ಕೆ.ಪ್ರಶಾಂತಕುಮಾರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.