ADVERTISEMENT

ದ್ವೇಷ, ಹಗೆತನ ಕಡಿಮೆ ಮಾಡುವುದು ಕುರ್‌ಆನ್ ಪ್ರವಚನದ ಉದ್ದೇಶ: ಮಹಮ್ಮದ್ ಕುಂಞ

ಸಾರ್ವಜನಿಕ ಕುರ್‌ಆನ್ ಪ್ರವಚನ

​ಪ್ರಜಾವಾಣಿ ವಾರ್ತೆ
Published 3 ಮೇ 2025, 13:46 IST
Last Updated 3 ಮೇ 2025, 13:46 IST
ಸಿಂಧನೂರಿನ ಆರ್‌ಜಿಎಂ ಶಾಲಾ ಮೈದಾನದಲ್ಲಿ ಶುಕ್ರವಾರ ಸಂಜೆ ಜಮಾಅತೆ ಇಸ್ಲಾಮಿ ಹಿಂದ್ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ಮೂರು ದಿನಗಳ ಸಾರ್ವಜನಿಕ ಕುರ್‌ಆನ್ ಪ್ರವಚನ ಕಾರ್ಯಕ್ರಮವನ್ನು ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಉದ್ಘಾಟಿಸಿದರು
ಸಿಂಧನೂರಿನ ಆರ್‌ಜಿಎಂ ಶಾಲಾ ಮೈದಾನದಲ್ಲಿ ಶುಕ್ರವಾರ ಸಂಜೆ ಜಮಾಅತೆ ಇಸ್ಲಾಮಿ ಹಿಂದ್ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ಮೂರು ದಿನಗಳ ಸಾರ್ವಜನಿಕ ಕುರ್‌ಆನ್ ಪ್ರವಚನ ಕಾರ್ಯಕ್ರಮವನ್ನು ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಉದ್ಘಾಟಿಸಿದರು   

ಸಿಂಧನೂರು: ದೇಶ, ಭಾಷೆ, ಧರ್ಮ ಮತ್ತು ಜನಾಂಗಗಳ ನಡುವೆ ಇತ್ತೀಚಿನ ವರ್ಷಗಳಲ್ಲಿ ದ್ವೇಷ, ಹಗೆತನ ಮತ್ತು ವಿಭಜನೆಯ ಸಂದೇಶಗಳು ಉಲ್ಭಣಗೊಳ್ಳುತ್ತಿದ್ದು, ಅವುಗಳನ್ನು ಕಡಿಮೆ ಮಾಡುವುದೇ ಸಾರ್ವಜನಿಕ ಕುರ್‌ಆನ್ ಪ್ರವಚನದ ಮೂಲ ಉದ್ದೇಶವಾಗಿದೆ ಎಂದು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞ ಅಭಿಪ್ರಾಯಪಟ್ಟರು.

ನಗರದ ಆರ್‌ಜಿಎಂ ಶಾಲಾ ಮೈದಾನದಲ್ಲಿ ಶುಕ್ರವಾರ ಸಂಜೆ ಜಮಾಅತೆ ಇಸ್ಲಾಮಿ ಹಿಂದ್ ತಾಲ್ಲೂಕು ಘಟಕದಿಂದ ಹಮ್ಮಿಕೊಂಡಿದ್ದ ಮೂರು ದಿನಗಳ ಸಾರ್ವಜನಿಕ ಕುರ್‌ಆನ್ ಪ್ರವಚನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಿರಿಯರಿಂದ ಪ್ರಯೋಗಿಸುವ ದ್ವೇಷ, ಅಸೂಹೆ ಮತ್ತು ಕೆಡುಕಿನ ಮಾತುಗಳು ಮಕ್ಕಳ ಮೇಲೆ ಪ್ರಭಾವ ಬೀರುತ್ತಿರುವುದರಿಂದ ಭವಿಷ್ಯದ ದಿನಗಳು ಅಪಾಯಕಾರಿಯಾಗಲಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಮಕ್ಕಳಿಗೆ ಧರ್ಮ ಮತ್ತು ಮಾನವೀಯ ಮೌಲ್ಯಗಳನ್ನು ತಿಳಿಸಿಕೊಡಬೇಕಾದ ಜವಾಬ್ದಾರಿಯನ್ನು ನಾಗರಿಕರು ಮರೆಯಬಾರದು’ ಎಂದು ಹೇಳಿದರು.

ವಳಬಳ್ಳಾರಿ ಸುವರ್ಣಗಿರಿ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾರ್ವಜನಿಕ ಕುರ್‌ಆನ್ ಪ್ರವಚನ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಶರಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಹಂಪನಗೌಡ ಬಾದರ್ಲಿ, ಆರ್.ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಮಾತನಾಡಿದರು.

ನಿವೃತ್ತ ಪ್ರಾಶಂಪಾಲ ಶಾಶ್ವತಸ್ವಾಮಿ ಮುಕ್ಕುಂದಿಮಠ, ನಗರಸಭೆ ಉಪಾಧ್ಯಕ್ಷೆ ಮಂಜುಳಾ ಪ್ರಭುರಾಜ, ಪೌರಾಯುಕ್ತ ಮಂಜುನಾಥ ಗುಂಡೂರು, ಸದಸ್ಯರಾದ ಕೆ.ಜಿಲಾನಿಪಾಷ, ಸಣ್ಣ ವೀರಭದ್ರಪ್ಪ ಕುರುಕುಂದಿ, ವೀರೇಶ ಹಟ್ಟಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಟಿ.ಹುಸೇನ್‍ಸಾಬ, ವಾಲ್ಮೀಕಿ ಸಮಾಜದ ಅಧ್ಯಕ್ಷ ಆರ್.ತಿಮ್ಮಯ್ಯ ನಾಯಕ, ಕಾರ್ಮಿಕ ಮುಖಂಡ ವೆಂಕನಗೌಡ ಗದ್ರಟಗಿ, ಜಿ.ಪಂ ಮಾಜಿ ಸದಸ್ಯ ಬಸವರಾಜ ಹಿರೇಗೌಡರ್, ಡಾ.ಪದ್ಮಾ ಪಾಟೀಲ, ನಿವೃತ್ತ ಶಿಕ್ಷಕಿ ಸಿದ್ದೇಶ್ವರಿ, ಎಸ್.ದೇವೇಂದ್ರ ಗೌಡ, ಪತ್ರಕರ್ತರಾದ ಅಶೋಕ ಬೆನ್ನೂರು, ಅಮರೇಶ ಅಲಬನೂರು ಉಪಸ್ಥಿತರಿದ್ದರು. ಹುಸೇನಪ್ಪ ಅಮರಾಪುರ ನಿರೂಪಿಸಿದರು.

ಸಿಂಧನೂರಿನ ಆರ್‍ಜಿಎಂ ಶಾಲಾ ಮೈದಾನದಲ್ಲಿ ಶುಕ್ರವಾರ ಸಂಜೆ ಜಮಾಅತೆ ಇಸ್ಲಾಮಿ ಹಿಂದ್ ತಾಲ್ಲೂಕು ಘಟಕದಿಂದ ಹಮ್ಮಿಕೊಂಡಿದ್ದ ಮೂರು ದಿನಗಳ ಸಾರ್ವಜನಿಕ ಕುರ್‌ಆನ್ ಪ್ರವಚನ ಕಾರ್ಯಕ್ರಮದಲ್ಲಿ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.