
ರಾಯಚೂರು: ‘ಜಿಲ್ಲೆಯ ಯುವಜನರು ಭಾರತೀಯ ಸೇನೆಗೆ ಸೇರುವ ಮೂಲಕ ದೇಶಸೇವೆಯಲ್ಲಿ ಮುನ್ನಡೆಯಬೇಕು. ಶಿಸ್ತು , ಧೈರ್ಯ ಮತ್ತು ದೇಶಭಕ್ತಿಯೇ ಸೈನಿಕನ ಅಸ್ತ್ರ ವಿದ್ಯಾರ್ಥಿ ದೆಸೆಯಿಂದಲೇ ದೈಹಿಕ ಹಾಗೂ ಮಾನಸಿಕವಾಗಿ ಸಿದ್ಧತೆ ಆರಂಭಿಸಿ’ ಎಂದು ಮೇಜರ್ ಭರತ್ ಭೂಷಣ್ ಹೇಳಿದರು.
ನಗರದ ವೇದಾಂತ ಪದವಿ ಮಹಾವಿದ್ಯಾಲಯದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಪರಿಷತ್ ನಡೆ ಯುವಕರ ಕಡೆ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಿಯುಸಿ ವಿದ್ಯಾಭ್ಯಾಸದ ನಂತರ ಎನ್‌ಡಿಎ ಸೇರಿದಂತೆ ಸೈನ್ಯದ ವಿವಿಧ ಪರೀಕ್ಷೆಗಳು ಯಾವ ರೀತಿಯಲ್ಲಿ ಇರುತ್ತದೆ ಎಂಬುದನ್ನು ತಿಳಿಸಿದರು. ಆಪರೇಷನ್ ಸಿಂಧೂರ್ ಹಾಗೂ ಸೈನ್ಯದ ಇತರ ಮುಖ್ಯವಾದ ಅಪರೇಷನ್ ಗಳಲ್ಲಿ ಯಾವ ರೀತಿಯಾಗಿ ಸೈನ್ಯ ಭಾಗವಹಿಸಿತು ಎಂಬುದನ್ನು ತಿಳಿಸಿದರು.
ರಾಜ್ಯದ ಹಲವು ಭಾಗಗಳಿಂದ ಸೈನ್ಯಕ್ಕೆ ಸಾವಿರಾರು ಮಕ್ಕಳು ಸೇರಿದರೆ ರಾಯಚೂರಿನ ಯುವಜನರು ಮಾತ್ರ ಕಾಣಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಸೈನ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಎಂದರು.
ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ಧಯ್ಯಸ್ವಾಮಿ ಕುಕನೂರು, ತಾಲ್ಲೂಕು ಕಸಾಪ ಅಧ್ಯಕ್ಷ ಡಾ.ಬಿ.ವಿಜಯ ರಾಜೇಂದ್ರ ಕಾಲೇಜಿನ ಆಡಳಿತಾಧಿಕಾರಿ ರಾಕೇಶ್ ರಾಜಲಬಂಡಿ , ಮ್ಯಾಕ್ಸ್ ವೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ವರಲು,ಕಸಾಪ ಪದಾಧಿಕಾರಿಗಳಾದ ಅಮರೇಶ ಆಶಿಹಾಳ, ದೇವೇಂದ್ರಮ್ಮ, ಶರಣಪ್ಪ ಚಲುವಾದಿ, ರಾವುತರಾವ್ ಬರೂರ, ಪ್ರತಿಭಾ ಗೋನಾಳ, ಮಹಾಂತೇಶ್ ಹೀರಾ, ವೀರೇಶ್ ಬಾಬು, ಧರ್ಮಾವತಿ ನಾಯಕ, ಹಾಗೂ ಇನ್ನಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.