
ಪ್ರಜಾವಾಣಿ ವಾರ್ತೆರಾಯಚೂರು: ಕೋವಿಡ್ ಎರಡನೇ ಅಲೆ ನಿಯಂತ್ರಣ ಕ್ರಮವಾಗಿ ಮಂತ್ರಾಲಯ ಮಠದ ಪ್ರಾಕಾರದಲ್ಲಿ ಪ್ರದಕ್ಷಿಣೆ ಮತ್ತು ಉರುಳು ಸೇವೆ ಮಾಡುವುದನ್ನು ರದ್ದುಪಡಿಸಲಾಗಿದೆ.
ಮೂಲ ವೃಂದಾವನ ದರ್ಶನ, ಮಂತ್ರಾಕ್ಷತೆ ಇರುವುದು. ತೀರ್ಥ ವಿತರಣೆಯಿಲ್ಲ. ದಿನ ನಡೆಯುವ ರಥೋತ್ಸವದಲ್ಲಿ ಸೇವಾಕರ್ತರಿಗೆ ಮಾತ್ರ ಅವಕಾಶ ನೋಡಲಾಗುವುದು.
ಅನ್ನಪ್ರಸಾದ, ಸ್ವಾಮೀಜಿ ಆಶೀರ್ವಾದಕ್ಕೆ ಅವಕಾಶ ಕಲ್ಪಿಸಲಾಗಿದೆ. ಪರಿಸ್ಥಿತಿ ಅವಲೋಕಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.