ADVERTISEMENT

ಮಾನ್ವಿ | ಜೋಳದ ರಾಶಿಗೆ ಬೆಂಕಿ: ಪರಿಹಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 8:05 IST
Last Updated 25 ಫೆಬ್ರುವರಿ 2026, 8:05 IST
ಮಾನ್ವಿ ತಾಲ್ಲೂಕಿನ ಜಾಗೀರಪನ್ನೂರು ಗ್ರಾಮದಲ್ಲಿ ಜೋಳದ ರಾಶಿ ಬೆಂಕಿಗಾಹುತಿಯಾದ ಜಮೀನಿಗೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮತ್ತಿತರರು ಮಂಗಳವಾರ ಭೇಟಿ ನೀಡಿದರು
ಮಾನ್ವಿ ತಾಲ್ಲೂಕಿನ ಜಾಗೀರಪನ್ನೂರು ಗ್ರಾಮದಲ್ಲಿ ಜೋಳದ ರಾಶಿ ಬೆಂಕಿಗಾಹುತಿಯಾದ ಜಮೀನಿಗೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮತ್ತಿತರರು ಮಂಗಳವಾರ ಭೇಟಿ ನೀಡಿದರು   

ಮಾನ್ವಿ: ತಾಲ್ಲೂಕಿನ ಜಾಗೀರಪನ್ನೂರು ಗ್ರಾಮದಲ್ಲಿ ಈಚೆಗೆ ಜೋಳದ ರಾಶಿ ಬೆಂಕಿಗಾಹುತಿಯಾದ ಜಮೀನಿಗೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಂಗಳವಾರ ಭೇಟಿ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರೈತ ಯಂಕೋಬ ದಳಪತಿ 6 ಎಕರೆ ಜಮೀನಿನಲ್ಲಿ ಬೆಳೆದ ಜೋಳದ ರಾಶಿಗೆ ಕಿಡಿಗೇಡಿಗಳು ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿರುವ ಘಟನೆ ಬಗ್ಗೆ ಅಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು. ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು

ಜೆಡಿಎಸ್ ಪಕ್ಷದ ರಾಜ್ಯ ಯುವ ಘಟಕದ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ತಾಲ್ಲೂಕು ರೈತ ಘಟಕದ ಅಧ್ಯಕ್ಷ ಶರಣಪ್ಪಗೌಡ ಮದ್ಲಾಪುರ, ಮುಖಂಡರಾದ ಬಾಷಾ ಸಾಬ್, ಪಿ .ರವಿಕುಮಾರ , ಯಲ್ಲಪ್ಪ ನಾಯಕ , ಸಂಗನಗೌಡ ಜಾಗೀರಪನ್ನೂರು, ವಿಜಯ್ ನಾಯಕ ಕೊಟ್ನೆಕಲ್, ಖಾಸಿಂ ಸಾಬ್ ಚಿಕಲಪರ್ವಿ, ಬಸವರಾಜ ಸ್ವಾಮಿ ಚೀಕಲಪರ್ವಿ, ಬಸವರಾಜ ಜಾಗೀರಪನ್ನೂರು ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.