ಮಾನ್ವಿ: ಭತ್ತದ ವ್ಯಾಪಾರಿಯಿಂದ ವಂಚನೆಗೊಳಗಾಗಿರುವ ರೈತರು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅವರಿಗೆ ಭಾನುವಾರ ಮನವಿ ಸಲ್ಲಿಸಿದರು.
ನೂರಾರು ರೈತರಿಂದ ಸುಮಾರು ₹30 ಕೋಟಿ ಮೌಲ್ಯದ ಭತ್ತ ಖರೀದಿಸಿ ಪರಾರಿಯಾಗಿರುವ ವ್ಯಾಪಾರಿ ಜಿ.ಶಿವರಾಮಕೃಷ್ಣ ಬಂಧನಕ್ಕೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಬೇಕು. ವ್ಯಾಪಾರಿಯಿಂದ ರೈತರಿಗೆ ಹಣ ಕೊಡಿಸಬೇಕು ಎಂದು ಒತ್ತಾಯಿಸಿದರು.
ರೈತರಾದ ರಮೇಶ ತಡಕಲ್, ಮಂಜುನಾಥ, ಅಮರೇಶ ನಾಯಕ, ರಜಾಕ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.