ADVERTISEMENT

ಮಸ್ಕಿ: ಕ್ಷೇತ್ರದಲ್ಲಿ 7 ಜನ ಕೋವಿಡ್ ಸೋಂಕಿತರು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 4:33 IST
Last Updated 18 ಏಪ್ರಿಲ್ 2021, 4:33 IST
ಮಸ್ಕಿ ಪಟ್ಟಣದ ಸಖಿ ಮತಗಟ್ಟೆಯಲ್ಲಿ ಪ್ರಥಮ ಬಾರಿ ಮತದಾನ ಹಕ್ಕು ಚಲಾಯಿಸಿದ ಯುವಕನಿಗೆ ಜಿಲ್ಲಾ ಚುನಾವಣಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅವರು ತೆಂಗಿನ ಸಸಿ ನೀಡಿದರು
ಮಸ್ಕಿ ಪಟ್ಟಣದ ಸಖಿ ಮತಗಟ್ಟೆಯಲ್ಲಿ ಪ್ರಥಮ ಬಾರಿ ಮತದಾನ ಹಕ್ಕು ಚಲಾಯಿಸಿದ ಯುವಕನಿಗೆ ಜಿಲ್ಲಾ ಚುನಾವಣಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅವರು ತೆಂಗಿನ ಸಸಿ ನೀಡಿದರು   

ಮಸ್ಕಿ (ರಾಯಚೂರು): ವಿಧಾನ ಸಭೆಕ್ಷೇತ್ರದಲ್ಲಿ ಒಟ್ಟು 7 ಜನ ಕೋವಿಡ್ ಸೋಂಕಿತರಿದ್ದು, ಸಂಜೆ 6ರ ನಂತರ ಮತದಾನ ಮಾಡಲು ಎಲ್ಲರಿಗೂ ಮಾಹಿತಿ ನೀಡಲಾಗಿದೆ. ಮತಗಟ್ಟೆ‌ ಸಿಬ್ಬಂದಿಗೆ ಪಿಪಿಇ ಕಿಟ್ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಶನಿವಾರ ತಿಳಿಸಿದರು.

ಮಸ್ಕಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಭೇಟಿ ನೀಡಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಅಣಕು ಮತದಾನದ ವೇಳೆ ಐದು ಕಡೆಗಳಲ್ಲಿ ಮತಯಂತ್ರ, ವಿವಿಪ್ಯಾಟ್ ಗಳಲ್ಲಿ ದೋಷ ಕಾಣಿಸಿತ್ತು. ಕೂಡಲೇ ಮತಯಂತ್ರ ಹಾಗೂ ವಿವಿ ಪ್ಯಾಟ್ ಬದಲಿಸಿದ ನಂತರ ಮತದಾನ ಆರಂಭಿಸಲಾಗಿದೆ. ಎಲ್ಲಿಯೂ ಅಹಿತಕರ ಘಟನೆ ಇಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT