ADVERTISEMENT

ಮತದಾನ ವಂಚಿತ ಮತದಾರರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 4:30 IST
Last Updated 18 ಏಪ್ರಿಲ್ 2021, 4:30 IST
ತುರ್ವಿಹಾಳ ಪಟ್ಟಣದಲ್ಲಿ ಮತ ವಂಚಿತ ಮತದಾರರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು
ತುರ್ವಿಹಾಳ ಪಟ್ಟಣದಲ್ಲಿ ಮತ ವಂಚಿತ ಮತದಾರರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು   

ತುರ್ವಿಹಾಳ: ಮತದಾರರ ಪಟ್ಟಿಯ ಪರಿಷ್ಕರಣೆಯಿಂದಾಗಿ ಮತದಾರ ಪಟ್ಟಿಯಿಂದ ತಮ್ಮ ಹೆಸರನ್ನು ಕೈ ಬಿಟ್ಟಿರುವುದಕ್ಕೆ ಕಾರಣ ಉಪ ಚುನಾವಣೆಯಲ್ಲಿ ಮತ ಹಾಕುವ ಅವಕಾಶ ಕಳೆದುಕೊಂಡಿರುವುದಕ್ಕೆ ಮತದಾರರು ಶನಿವಾರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಪಟ್ಟಣದ ಮತದಾರರು ಮತ ಚಲಾಯಿಸಲು ಬಂದಾಗ ಮತದಾರರ ಪಟ್ಟಿಯಲ್ಲಿ ಹೆಸರು ಸಿಗದೇ ಇದ್ದಾಗ, ‘ತಮ್ಮ ಅಭ್ಯರ್ಥಿಯ ಆಯ್ಕೆಯ ಕನಸು ನನಸಾಗುವ ಅವಕಾಶ ಸಿಗಲಿಲ್ಲ, ನಾವೂ ಬದುಕಿದ್ದು ಸತ್ತಂತೆ‘ ಎಂದು ಅಳಲು ತೋಡಿಕೊಂಡರು.

‘ಈ ಹಿಂದೆ ಅನೇಕ ಚುನಾವಣೆಯಲ್ಲಿ ಮತ ಚಲಾಯಿಸಿದ್ದೇವೆ. ಆದರೆ ಈ ಬಾರಿ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಈ ಉಪಚುನಾವಣೆಯಲ್ಲಿ ಮತ ಚಲಾಯಿಸುವ ಅವಕಾಶ ತಪ್ಪಿತು‘ ಎಂದು ಮತದಾರರು ದೂರಿದರು.

ADVERTISEMENT

ಸುಮಾರು 50 ಜನ ಮತ ವಂಚಿತ ಮತದಾರರು ಚುನಾವಣಾ ಅಧಿಕಾರಿಗಳ ಮೂಲಕ ತಹಶೀಲ್ದಾರ, ಮತ್ತು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದಾಗ , ಅವರು ಸಧ್ಯಕ್ಕೆ ದೂರು ಕೊಡಿ, ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಂಕ್ರಗೌಡ ದೇವರಮನಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.